ಪ್ರಮುಖ ಸುದ್ದಿವಿದೇಶ

ಕೊರೊನಾ ವೈರಸ್ ನಿಯಂತ್ರಣಕ್ಕೆ ತಮ್ಮ ಆಸ್ತಿಯ ಶೇ.28 ರಷ್ಟು ಭಾಗ ನೀಡಿದ ಟ್ವಿಟರ್ ಸಿಇಒ

ವಾಷಿಂಗ್ಟನ್,ಏ.9-ಕೊರೊನಾ ವೈರಸ್ ನಿಯಂತ್ರಣಕ್ಕೆ ಟ್ವಿಟ್ಟರ್ ಸಿಇಒ ಜಾನ್ ಡಾರ್ಸೆ ದೇಣಿಗೆ ನೀಡಿದ್ದಾರೆ. ತಮ್ಮ ಆಸ್ತಿಯ ಶೇ.28 ರಷ್ಟು ಭಾಗವನ್ನು ಅವರು ದೇಣಿಗೆ ನೀಡಿದ್ದಾರೆ.

ತಮ್ಮ ಆರ್ಥಿಕ ನೆರವು ಮುಖ್ಯವಾಗಿ ಬಾಲಕಿಯರ ಆರೋಗ್ಯ ಮತ್ತು ಶಿಕ್ಷಣಕ್ಕೆ ಜಾನ್ ಡಾರ್ಸೆ ಎಂದು ತಿಳಿಸಿದ್ದಾರೆ. ಕೊರೊನಾ ಸೋಂಕಿನಿಂದ ಹೆಣ್ಣುಮಕ್ಕಳ ಸ್ಥಿತಿ ಹಾಳಾಗಿದೆ. ಅವರ ಆರೋಗ್ಯ ಹಾಗೂ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಹೀಗಾಗಿ, ತಮ್ಮ ಚಾರಿಟಿಯ ಎಲ್ಲ ದೇಣಿಗೆಯನ್ನು ಇದಕ್ಕಾಗಿಯೇ ನೀಡುವುದಾಗಿ ಜಾನ್ ಡಾರ್ಸೆ ತಿಳಿಸಿದ್ದಾರೆ. ಜೊತೆಗೆ ಟ್ವಿಟ್ಟರ್ನಲ್ಲಿ ಸಂಗ್ರಹವಾದ ಎಲ್ಲ ದೇಣಿಗೆ ಪಾರದರ್ಶಕವಾಗಿ ಇರಲಿದೆ ಎಂದಿದ್ದಾರೆ.

ಹಣಕಾಸಿನ ಸಹಾಯದೊಂದಿಗೆ ವಿಶ್ವ ಸಂಸ್ಥೆಯ ಜೊತೆಗೆ ಜನ ಜಾಗೃತಿ ಕಾರ್ಯಕ್ರಮಗಳಿಗೆ ಅಗತ್ಯವಿದ್ದರೆ, ಕೈ ಜೋಡಿಸುವುದಾಗಿ ಟ್ವಿಟ್ಟರ್ ಸಿಎಒ ತಿಳಿಸಿದ್ದಾರೆ. ಈಗಾಗಲೇ ಫೇಸ್ ಬುಕ್, ಮೈಕ್ರೋಸಾಫ್ಟ್, ಅಮೆಜಾನ್, ರಿಲೆಯನ್ಸ್, ಟಾಟಾ ಸೇರಿದಂತೆ ಅನೇಕ ಸಂಸ್ಥೆಗಳು ಕೊರೊನಾ ತಡೆಗೆ ಸಹಾಯ ಹಸ್ತಾ ಚಾಚಿವೆ. (ಎಂ.ಎನ್)

Leave a Reply

comments

Related Articles

error: