ಪ್ರಮುಖ ಸುದ್ದಿ

ಡೊನಾಲ್ಡ್ ಟ್ರಂಪ್ ಪ್ರಶಂಸೆಗೆ ಪಿಎಂ ಮೋದಿ ಸ್ಪಂದನೆ  : ಕೊರೋನಾ ವಿರುದ್ಧದ ಯುದ್ಧವನ್ನು ಭಾರತ  ಮಾನವೀಯತೆಯಿಂದ ಗೆಲ್ಲಲಿದೆ ; ಒಟ್ಟಾಗಿ ಹೋರಾಡೋಣ

ದೇಶ(ನವದೆಹಲಿ)ಏ9:- ಹೈಡ್ರಾಕ್ಸಿಕ್ಲೋರೋಕ್ವಿನ್  ಔಷಧಿ ಸರಬರಾಜು ಮಾಡಿದ್ದಕ್ಕಾಗಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ   ಧನ್ಯವಾದ  ಹೇಳಿ, ಪ್ರಶಂಸಿಸಿದ್ದಕ್ಕೆ  ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

ಬಿಕ್ಕಟ್ಟಿನ ಸಮಯದಲ್ಲಿ ಸ್ನೇಹಿತರು ಹತ್ತಿರ ಬರುತ್ತಾರೆ ಎಂದು ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರ ಹೇಳಿಕೆ ಒಪ್ಪಿಕೊಂಡಿದ್ದು, ಕೋವಿಡ್ -19 ವಿರುದ್ಧದ ಯುದ್ಧದಲ್ಲಿ ಮಾನವೀಯಯಿಂದ ಹೋರಾಡಲು ಸಹಾಯವನ್ನೂ  ಮಾಡಲಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್ ನಲ್ಲಿ   ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಮ್ಮ ಮಾತಿಗೆ ಸಹಮತವಿದೆ. ಇಂತಹ   ಸಮಯವು ಸ್ನೇಹಿತರನ್ನು ಹತ್ತಿರ ತರುತ್ತದೆ. ಭಾರತ-ಯುಎಸ್ ಸ್ನೇಹ ಮೊದಲಿಗಿಂತ ಬಲಿಷ್ಠವಾಗಿದೆ.  ಕೋವಿಡ್ -19 ವಿರುದ್ಧದ ಯುದ್ಧದಲ್ಲಿ ಭಾರತವು ಮಾನವೀಯಯಿಂದ ಹೋರಾಡಲಿದ್ದು,  ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತದೆ. ನಾವು ಒಟ್ಟಿಗೆ ಗೆಲ್ಲೋಣ’ ಎಂದಿದ್ದಾರೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: