ಕರ್ನಾಟಕ

ಬೆಂಗಳೂರು: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಬೆಂಗಳೂರು,ಏ.9-ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ವಾಣಿವಿಲಾಸ ಆಸ್ಪತ್ರೆಯಲ್ಲಿ ಕನಕಪುರದ ರಾಮ ಹಾಗೂ ಶೋಭಾ ದಂಪತಿಗೆ ತ್ರಿವಳಿ ಮಗು ಜನಿಸಿದೆ. ಇದು ಅವಧಿಪೂರ್ವ ಜನನವಾದರೂ ಮಕ್ಕಳು ಹಾಗೂ ತಾಯಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಒಂದು ಶಿಶು 1,730 ಗ್ರಾಂ, ಮತ್ತೊಂದು ಶಿಶು 1,990 ಗ್ರಾಂ ಹಾಗೂ ಇನ್ನೊಂದು ಶಿಶು 2,100 ಗ್ರಾಂ ತೂಕವಿದೆ.

ಮೊದಲಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದರು. ಸ್ಕ್ಯಾ‌ನಿಂಗ್‌ ಮಾಡಿದಾಗ ಮೂರು ಶಿಶುಗಳು ಇರುವುದು ತಿಳಿಯಿತು. ಇದು ಹೆಚ್ಚು ಕ್ಲಿಷ್ಟಕರವಾಗಿರುವುದರಿಂದ ಅಲ್ಲಿನ ವೈದ್ಯರು ವಾಣಿ ವಿಲಾಸಕ್ಕೆ ಹೋಗುವಂತೆ ಶಿಫಾರಸು ಮಾಡಿದರು. ಶೋಭಾ ಅವರು 5ನೇ ತಿಂಗಳಿಂದ ವಾಣಿ ವಿಲಾಸಕ್ಕೆ ಆಗಾಗ್ಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು.

ಇದು ಬಹಳ ಅಪರೂಪದ ಪ್ರಕರಣವಾಗಿದೆ. ಇಂತಹ ಪ್ರಕರಣಗಳಲ್ಲಿ ಸಹಜ ಹೆರಿಗೆ ಸಾಧ್ಯವಿಲ್ಲ. ಹೀಗಾಗಿ ಸಿಜೇರಿಯನ್‌ ಮಾಡಲಾಗಿದೆ. ಎಂಟೂವರೆ ತಿಂಗಳಿಗೆ ಜನನವಾಗಿದೆ. ಕೊರೊನಾ ಸೋಂಕು ಭೀತಿ ಇರುವುದರಿಂದ ಪ್ರಯಾಣ ಕಷ್ಟವೆಂದು ಬೇಗನೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು. ಒಂದು ವಾರ ಆಸ್ಪತ್ರೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿದೆ. ಶಿಶುಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೇವೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ.ಜಗನ್ನಾಥ್‌ ತಿಳಿಸಿದರು. (ಎಂ.ಎನ್)

 

Leave a Reply

comments

Related Articles

error: