ಪ್ರಮುಖ ಸುದ್ದಿ

ಏಪ್ರಿಲ್ 30 ರವರೆಗೆ ಲಾಕ್ಡೌನ್ ವಿಸ್ತರಿಸಿದ ಒಡಿಶಾ ಸರ್ಕಾರ : ಜೂನ್ 17 ರವರೆಗೆ ಶಾಲಾ-ಕಾಲೇಜು ಬಂದ್

ದೇಶ(ಒಡಿಶಾ)ಏ.9:- ದೇಶದಲ್ಲಿ  ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು  ಒಡಿಶಾ ಸರ್ಕಾರ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಿದೆ.

21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮುಗಿಯುವ ಮೊದಲೇ, ಒಡಿಶಾ ಸರ್ಕಾರವು ಕೊರೋನಾ ಲಾಕ್‌ಡೌನ್ ಅನ್ನು ಏಪ್ರಿಲ್ 30 ಕ್ಕೆ ವಿಸ್ತರಿಸಲು ನಿರ್ಧರಿಸಿದ್ದು, ಲಾಕ್ ಡೌನ್ ವಿಸ್ತರಿಸಿದ  ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಈ ಬಗ್ಗೆ ಘೋಷಿಸಿದ್ದಾರೆ. ಜೂನ್ 17 ರವರೆಗೆ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ಸಹ ಮುಚ್ಚಲ್ಪಡುತ್ತವೆ ಎಂದು ಹೇಳಿದ್ದು, ಅದೇ ಸಮಯದಲ್ಲಿ ಏಪ್ರಿಲ್ 30 ರವರೆಗೆ ರೈಲು ಮತ್ತು ವಿಮಾನ ಸೇವೆಯನ್ನು ಪ್ರಾರಂಭಿಸದಂತೆ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಏಪ್ರಿಲ್ 14 ರವರೆಗೆ ಪ್ರಧಾನಿ ಮೋದಿ ಅವರು ಲಾಕ್ ಡೌನ್ ಘೋಷಿಸಿದ್ದರು. ಅದನ್ನು ವಿಸ್ತರಿಸುವ ಸುಳಿವನ್ನೂ ಕೂಡ ಪ್ರಧಾನಿಯವರು ನೀಡಿದ್ದಾರೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: