ಕ್ರೀಡೆಪ್ರಮುಖ ಸುದ್ದಿ

ಹಸಿದವರಿಗೆ ಆಹಾರ ನೀಡಿ ಹೃದಯ ಗೆದ್ದ  ಮಾಜಿ ಹಾಕಿ ಆಟಗಾರ್ತಿ,  ಪೊಲೀಸ್ ಕರ್ತವ್ಯದಲ್ಲಿರುವ  ನೇಹಾ ಚೌಹಾಣ್

ದೇಶ(ಚಂಡೀಗಢ) ಏ.9:-  ಕೊರೋನಾ ವೈರಸ್ ವಿರುದ್ಧದ ಈ ಯುದ್ಧದಲ್ಲಿ ಪಂಚಕುಲ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ನೇಹಾ ಚೌಹಾನ್   ಏಕಕಾಲದಲ್ಲಿ ಎರಡು ಕಡೆಗಳಲ್ಲಿ ತಮ್ಮ ಕರ್ತವ್ಯ  ನಿರ್ವಹಿಸುತ್ತಿದ್ದಾರೆ.

ಒಂದೆಡೆ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದರೆ,  ಇನ್ನೊಂದೆಡೆ ಈ ಕಷ್ಟದಲ್ಲಿರುವವರಿಗೆ ಸಹಾಯ.  ಲಾಕ್ ಡೌನ್ ನ ಈ ಸಮಯದಲ್ಲಿ   ಅಂತಾರಾಷ್ಟ್ರೀಯ ಮಾಜಿ ಹಾಕಿ ಆಟಗಾರ್ತಿ, ಚಿನ್ನದ ಪದಕ ವಿಜೇತ ನೇಹಾ ಚೌಹಾಣ್  ತನ್ನ ಪೊಲೀಸ್ ಠಾಣೆಯಲ್ಲಿ ಪ್ರತಿದಿನ 300 ರಿಂದ 400 ನಿರ್ಗತಿಕರಿಗೆ ಆಹಾರವನ್ನು ವಿತರಿಸುತ್ತಿದ್ದಾರೆ.

2000 ರಲ್ಲಿ ಹಾಂಗ್ ಕಾಂಗ್‌ನಲ್ಲಿ ನಡೆದ 18 ವರ್ಷದೊಳಗಿನ ಮಹಿಳಾ ಏಷ್ಯನ್ ಹಾಕಿ ಫೆಡರೇಶನ್ ಕಪ್‌ನಲ್ಲಿ ನೇಹಾ ಚೌಹಾಣ್ ತಂಡದ ಚಿನ್ನದ ಪದಕ ಗೆದ್ದರು.

ಪಂಚಕುಲ ಮಹಿಳಾ ಪೊಲೀಸ್ ಠಾಣೆ ಕೂಡ ಮಾನವೀಯತೆ  ಸೇವೆಯಲ್ಲಿ  ಅತ್ಯುತ್ತಮ ಉದಾಹರಣೆಯಾಗುತ್ತಿದೆ. . ಈ ಮಹಿಳಾ ಪೊಲೀಸ್ ಠಾಣೆಯು   ಏಷ್ಯಾ ಕ್ರೀಡಾಕೂಟದಲ್ಲಿ ದೇಶದ ಹೆಮ್ಮೆಯನ್ನು ಬೆಳೆಸಿದ ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ್ತಿ ನೇಹಾ ಚೌಹಾಣ್  ಅವರ ಕೈಯಲ್ಲಿದೆ. ಕೊರೋನಾದ ಕಾರಣದಿಂದಾಗಿ ಹರಿಯಾಣದಲ್ಲಿ ಲಾಕ್‌ಡೌನ್ ಜಾರಿಗೆ ಬಂದಾಗಿನಿಂದ ಎಸ್‌ಎಚ್‌ಒ ನೇಹಾ ಚೌಹಾಣ್ ಅವರು ತಮ್ಮ ತಂಡದೊಂದಿಗೆ ಪೊಲೀಸ್ ಠಾಣೆಯಲ್ಲಿ ಆಹಾರವನ್ನು ಸಿದ್ಧಪಡಿಸುತ್ತಿದ್ದಾರೆ ಮತ್ತು ಹಸಿದ ಜನರಿಗೆ ತಲುಪಿಸುತ್ತಿದ್ದಾರೆ.

ಎಸ್‌ಎಚ್‌ಒ ನೇಹಾ ಚೌಹಾಣ್  ಅವರು ಆರಂಭದಲ್ಲಿ ತಮ್ಮ ತಂಡಕ್ಕೆ ಹಣ ನೀಡುವ ಮೂಲಕ ಆಹಾರವನ್ನು ಸಿದ್ಧಪಡಿಸಲು ಪ್ರಾರಂಭಿಸಿದರು, ಆದರೆ ಈಗ ಇನ್ನೂ ಅನೇಕ ಜನರು ಈ ಕೆಲಸದಲ್ಲಿ ಅವರಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದಾರೆ. . ಪೊಲೀಸ್ ಠಾಣೆಯಲ್ಲಿ ಆಹಾರವನ್ನು ಸಿದ್ಧಪಡಿಸಿದ ನಂತರ, ಎಸ್‌ಎಚ್‌ಒ ನೇಹಾ ಚೌಹಾಣ್  ತಮ್ಮ ಕರ್ತವ್ಯಕ್ಕೆ ಹೊರಟು ಹೋಗುತ್ತಾರೆ,  ಈ ಸಮಯದಲ್ಲಿ ಅವರು ಅಗತ್ಯವಿರುವವರಿಗೆ ಆಹಾರವನ್ನು ವಿತರಿಸುತ್ತಾರೆ. ಗಸ್ತು ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಭಾಯಿಸುವ  ಎಸ್‌ಎಚ್‌ಒ ನೇಹಾ ಚೌಹಾಣ್ ಮತ್ತು ಅವರ ತಂಡವು ಯಾವುದೇ ಅಗತ್ಯವಿರುವವರಿಗೆ ಆಹಾರ ಬೇಕೇ ಅಥವಾ ಬೇಡವೇ ಎಂದು ಪರಿಶೀಲಿಸುತ್ತಲೇ ಇರುತ್ತದೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: