ಪ್ರಮುಖ ಸುದ್ದಿಮನರಂಜನೆ

ರಾಮಾಯಣದಲ್ಲಿ ‘ಸುಗ್ರೀವ’ನಾಗಿ ಕಾಣಿಸಿಕೊಂಡ ನಟ  ಶ್ಯಾಮ್ ಸುಂದರ್ ಕಲಾನಿ ಇನ್ನಿಲ್ಲ

ದೇಶ(ನವದೆಹಲಿ)ಏ.9:-  ರಾಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಸುಗ್ರೀವ್ ಪಾತ್ರದಲ್ಲಿ  ಅಭಿನಯಿಸಿದ ನಟ  ಶ್ಯಾಮ್ ಸುಂದರ್ ಕಲಾನಿ ನಿಧನರಾಗಿದ್ದಾರೆ.

ಈ ಕುರಿತ ಮಾಹಿತಿಯನ್ನು  ಶ್ರೀರಾಮನ ಪಾತ್ರದಲ್ಲಿ ನಟಿಸಿದ ನಟ ಅರುಣ್ ಗೋವಿಲ್   ಸೋಷಿಯಲ್ ಮೀಡಿಯಾದಲ್ಲಿ ನೀಡಿದ್ದಾರೆ. ಅವರು ತಮ್ಮ ಸಹ ಕಲಾವಿದನ ಸಾವಿಗೆ ದುಃಖ ವ್ಯಕ್ತಪಡಿಸಿ ಭಾವನಾತ್ಮಕ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ.

ಅರುಣ್ ಗೋವಿಲ್ ಟ್ವೀಟರ್ ನಲ್ಲಿ “ಶ್ರೀ ಶ್ಯಾಮ್ ಸುಂದರ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ರಾಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಸುಗ್ರೀವ ಪಾತ್ರವನ್ನು ನಿರ್ವಹಿಸಿದ್ದರು. ತುಂಬಾ ಒಳ್ಳೆಯ ವ್ಯಕ್ತಿ ಮತ್ತು ಸೌಮ್ಯ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದು ಕಂಬಿ ಮಿಡಿದಿದ್ದಾರೆ.

ಈಗ ಮತ್ತೆ  ಡಿಡಿ ನ್ಯಾಷನಲ್‌ನಲ್ಲಿ ‘ರಾಮಾಯಣ’ ಪ್ರಸಾರವಾಗುತ್ತಿದೆ., ಈ ಕಾರಣದಿಂದಾಗಿ ಎಲ್ಲಾ ಪಾತ್ರಗಳು ಮತ್ತು ನಟರು ಮತ್ತೊಮ್ಮೆ ಚರ್ಚೆಗೆ ಬಂದಿದ್ದಾರೆ. ಶ್ಯಾಮ್ ಸುಂದರ್ ಕಲಾನಿ   ಅವರು ತಮ್ಮ ನಟನಾ ಜೀವನವನ್ನು ರಾಮಾಯಣದಿಂದಲೇ ಪ್ರಾರಂಭಿಸಿದರು. ಆದರೆ ಇದರ ನಂತರ, ಅವರು ನಟನಾ ಜಗತ್ತಿನಲ್ಲಿ ವಿಶೇಷ  ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: