ಕರ್ನಾಟಕ

ಬಳ್ಳಾರಿ: ಒಂದೂವರೆ ಎಕರೆ ಹೊಲದಲ್ಲಿ ಬೆಳೆದಿದ್ದ ಈರುಳ್ಳಿ ಕದ್ದೊಯ್ದ ಕಳ್ಳರು  

ಬಳ್ಳಾರಿ,ಏ.9-ಲಾಕ್ ಡೌನ್ ನಡುವೆ ಹೊಲದಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಕಟಾವು ಮಾಡಿ ಕದ್ದೊಯ್ದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಯರ್ರಂಗಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಯರ್ರಂಗಳಿ ಗ್ರಾಮದ ಸುನೀಲ್ ಕುಮಾರ್ ರೈತನಿಗೆ ಸೇರಿದ ಒಂದೂವರೆ ಎಕರೆ ಹೊಲದಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಕಟಾವು ಮಾಡಿ ಕದ್ದೊಯ್ದಿದ್ದಾರೆ.

ಇನ್ನು ಒಂದೆರಡು ದಿನಗಳಲ್ಲಿ ಈರುಳ್ಳಿಯನ್ನು ಕಟಾವು ಮಾಡಬೇಕಿತ್ತು. ಲಾಕ್ ಡೌನ್ ಹಿನ್ನಲೆಯಲ್ಲಿ ಕೂಲಿ ಕಾರ್ಮಿಕರೂ ದೊರಕದ ಕಾರಣ ಕಟಾವಿಗೆ ವಿಳಂಬವಾಗಿತ್ತು. ಆದರೆ, ರಾತ್ರೋರಾತ್ರಿ ಈರುಳ್ಳಿ ಬೆಳೆಯನ್ನೇ ಕದ್ದೊಯ್ದಿದ್ದಾರೆ ಎಂದು ರೈತ ಸುನೀಲ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.

ಸಾಲಸೋಲ ಮಾಡಿ ಈರುಳ್ಳಿ ಬೆಳೆಯಲಾಗಿತ್ತು. ಉತ್ತಮ ಇಳುವರಿಯೇನೂ ಬಂದಿತ್ತಾದರೂ ಬೆಳೆ ಕಳ್ಳರ ಕದ್ದೊಯ್ದಿದ್ದಾರೆ. ಅತ್ತ ಸಾಲ ಮಾಡಿದ ಹಣ ತೀರಿಸಲಾಗಿಲ್ಲ, ಇತ್ತ ಬೆಳೆಯೂ ಕೈಗೆ ಸಿಕ್ಕಿಲ್ಲ ಎಂದು ರೈತ ಕಂಗಾಲಾಗಿದ್ದಾರೆ.

ರೈತ ಈ ಮೊದಲು ಹೊಲದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿತ್ತು. ಆದರೆ, ವಿಪರೀತ ಮಳೆ ಸುರಿದ ಕಾರಣ ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗಿ ಹೋಗಿತ್ತು.‌ ಹೀಗಾಗಿ, ಅದನ್ನು ನಾಶಪಡಿಸಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದರು. (ಎಂ.ಎನ್)

 

Leave a Reply

comments

Related Articles

error: