ಪ್ರಮುಖ ಸುದ್ದಿ

ಚೆಕ್ ಪೋಸ್ಟ್ ಅಧಿಕಾರಿಗಳಿಗೆ ಬೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ  ಮೂವರು ಯುವಕರ ಬಂಧನ

ರಾಜ್ಯ(ಮಂಡ್ಯ)ಏ.9:-  ಕೆ.ಆರ್.ಪೇಟೆ  ತಾಲೂಕಿನ ತೆಂಡೇಕೆರೆ ಚೆಕ್ ಪೋಸ್ಟ್ ಅಧಿಕಾರಿಗಳಿಗೆ ಬೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ  ಮೂವರು ಯುವಕರನ್ನು ಕೆ.ಆರ್.ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಗ್ರಾಮಾಂತರ ಪೋಲೀಸ್ ಸಬ್ ಇನ್ಸ್ ಪೆಕ್ಟರ್  ಲಕ್ಷ್ಮಣ್ ಅವರ ನೇತೃತ್ವದಲ್ಲಿ ರಾತ್ರಿಯಿಡೀ ಕಾರ್ಯಚರಣೆ ನಡೆಸಿ  ಪತ್ತೆ ಮಾಡಿ  ಬಂಧಿಸಿದ್ದಾರೆ. ಇದರಿಂದ ತಾಲೂಕಿನ ಜನತೆಯಲ್ಲಿ ಉಂಟಾಗಿದ್ದ  ಆತಂಕವನ್ನು ದೂರ ಮಾಡಿದ್ದಾರೆ. ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಗ್ರಾಮದ  ಮಹೇಶ್, ಅಭಿಷೇಕ್, ಶ್ರೀನಿವಾಸ್ ಬಂಧಿತ ಯುವಕರು ಎಂದು ಪೋಲಿಸರು ಮಾದ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂಧಿತರ ಪೈಕಿ ಮಹೇಶ್ ಬೆಂಗಳೂರಿನಲ್ಲಿ ಆಟೋ ಓಡಿಸುವ ವೃತ್ತಿ ಮಾಡುತ್ತಿದ್ದು, ಯುಗಾದಿ ಹಬ್ಬಕ್ಕೆ ಸ್ವಗ್ರಾಮ ಬಳ್ಳೇಕೆರೆಗೆ ಬಂದಿದ್ದರು. ಹಾಗಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಹೇಶ್ ಕೈಗೆ ಗ್ರಾಮ ಪಂಚಾಯಿತಿ ಯವರು ಸೀಲ್ ಹಾಕಿ ಹೋಂ ಕ್ವಾರೆಂಟೈನ್ ನಲ್ಲಿ ಇರುವಂತೆ  ಆದೇಶ ನೀಡಿದ್ದರು. ಆದರೆ ಸ್ನೇಹಿತರೊಂದಿಗೆ  ಚನಕುರಳಿಗೆ ಹೋಗಿ ವಾಪಸ್ ಬರುವಾಗ  ತೆಂಡೇಕೆರೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಹಿಡಿದುಕೊಳ್ಳುವ ಭಯದಿಂದ ನಮಗೆ ಕೊರೋನೊ ಇದೆ. ಮುಟ್ಟಿದರೆ ನಿಮಗೂ ಕೊರೋನೋ ಬರುತ್ತದೆ  ನೋಡಿ  ಎಂದು ಕೈಯಲ್ಲಿದ್ದ ಸೀಲ್ ತೋರಿಸಿ ಯುವಕರು   ಪರಾರಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: