ಮೈಸೂರು

ಕ್ವಾರೆಂಟೈನ್ ಮನೆಗಳಿಂದ ಬರುವ ತ್ಯಾಜ್ಯವನ್ನು ಬಯೋ ಮೆಡಿಕಲ್ ತ್ಯಾಜ್ಯವೆಂದು ಪರಿಗಣಿಸಿ ವಿಲೇವಾರಿ ಮಾಡಲಾಗುತ್ತಿದೆ : ಗುರುದತ್ ಹೆಗಡೆ

ಮೈಸೂರು,ಏ.9:- 30/3/2020 ರಂದು ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಅವರು ಕೋವಿಡ್-19 ಲಾಕ್ ಡೌನ್ ಪರಿಸ್ಥಿಯಲ್ಲಿ ಕ್ವಾರೆಂಟೈನ್ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡುವಾಗ ಪಾಲಿಸಬೇಕಾದ ಕ್ರಮಗಳ ಕುರಿತು ನಿರ್ದೇಶನ ನೀಡಿದ್ದು, ಅದರನ್ವಯ ಕ್ವಾರೆಂಟೈನ್ ಮನೆಗಳಿಂದ ಬರುವ ತ್ಯಾಜ್ಯವನ್ನು ಬಯೋ ಮೆಡಿಕಲ್ ತ್ಯಾಜ್ಯವೆಂದು ಪರಿಗಣಿಸಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಕ್ವಾರೆಂಟೈನ್ ಆದ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡಲು ಮೈಸೂರು ಮಹಾನಗರ ಪಾಲಿಕೆಯ 9 ಪ್ರತ್ಯೇಕವಾದ ವಾಹನದಲ್ಲಿ ತ್ಯಾಜ್ಯ ಸಂಗ್ರಹಣೆಗೆ ಕ್ರಮ ವಹಿಸಿ ಕಾಮನ್ ಬಯೋ ಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಘಟಕಕಕ್ಕೆ ಕಳುಹಿಸಲಾಗುತ್ತಿದೆ. 9ಪೌರಕಾರ್ಮಿಕರು ಹಾಗೂ ವಾಹನ ಚಾಲಕರಿಗೆ ವೈಯುಕ್ತಿಕ ಸುರಕ್ಷತೆಗೆ ಪಿಪಿಇ ಕಿಟ್ ನೀಡಿದ್ದು ತ್ಯಾಜ್ಯ ವಿಲೇವಾರಿ ಮಾಡುವ ವಾಹನವನ್ನು ಪ್ರತಿನಿತ್ಯ ಹೈಪೋಕ್ಲೋರೈಟ್ ಸೊಲ್ಯೂಷನ್ ಸಿಂಪಡಿಸಿ ನಂತರ ಸ್ವಚ್ಛಗೊಳಿಸಲಾಗುತ್ತಿದೆ. ತ್ಯಾಜ್ಯವನ್ನು ಆಳವಾದ ಗುಂಡಿಯಲ್ಲಿ ಹಾಕಬಹುದೆಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿರ್ದೇಶಿಸಿರುತ್ತದೆ ಎಂದಿದ್ದಾರೆ.

ಕೆಲವು ಸಾರ್ವಜನಿಕರು ಬೇಜವಾಬ್ದಾರಿತನದಿಂದ ಇತರ ತ್ಯಾಜ್ಯದೊಂದಿಗೆ ಕಸದ ಬುಟ್ಟಿಯಲ್ಲಿ ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಕವಚಗಳನ್ನು ಬಿಸಾಡುತ್ತಿರುವುದು ಕಂಡು ಬಂದಿದ್ದು ಈ ತ್ಯಾಜ್ಯದಿಂದ ಪರಿಸರ ಮಾಲಿನ್ಯವಾಗುವುದು, ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಹಾಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುವುದು. ಹಾಗಾಗಿ ನಾನ್ ಕ್ವಾರೆಂಟೈನ್ಡ್ ಮನೆಗಳಿಂದ ಬರುವ ಇತರೆ ತ್ಯಾಜ್ಯವನ್ನು ಸುರಕ್ಷತೆಗಾಗಿ ಬಳಸುವ ಮುಖ ಕವಚ, ಕೈಗವಸು ಇತ್ಯಾದಿಗಳನ್ನು ಗೃಹಬಳಕೆ ಹಾನಿಕಾರಕ ತ್ಯಾಜ್ಯವೆಂದು ಪರಿಗಣಿಸಿ ಈ ತ್ಯಾಜ್ಯವನ್ನು ಪ್ರತ್ಯೇಕವಾಗಿ ಪೇಪರ್ ನಲ್ಲಿ ಸುತ್ತಿ ಪೌರಕಾರ್ಮಿಕರಿಗೆ ನೀಡಬೇಕು. ಸಾಧಾರಣ ಗೃಹ ತ್ಯಾಜ್ದೊಂದಿಗೆ ಮಿಶ್ರ ಮಾಡಬಾರದು. ಒಂದು ವೇಳೆ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: