ಮೈಸೂರು

ಕೋವಿಡ್-19 : ಸಿಎಂ ಪರಿಹಾರ ನಿಧಿಗೆ ಸಾಹಿತಿ ಡಾ.ಎಸ್.ಎಲ್. ಭೈರಪ್ಪ, ಪ್ರಕಾಶ್ ಜುವೆಲ್ಲರ್ಸ್ ನಿಂದ ದೇಣಿಗೆ

ಮೈಸೂರು, ಏ.9:- ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಕೋವಿಡ್ 19ರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ  ನಿಧಿಗೆ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ಮೂಲಕ ತಮ್ಮ ದುಡಿಮೆಯ ಹಣದಲ್ಲಿ 1 ಲಕ್ಷ ರೂ.ಗಳ ದೇಣಿಗೆಯನ್ನು ನೀಡಿದರು.

ಮೈಸೂರಿನ ಪ್ರಕಾಶ್ ಜುವೆಲರ್ಸ್ ವತಿಯಿಂದ ಮುಖ್ಯಮಂತ್ರಿಗಳ ಕೊವೀಡ್-19 ಪರಿಹಾರ ನಿಧಿಗೆ 30,00,008 ರೂ. ಗಳ ದೇಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರಿಗೆ ಸಂಸದರಾದ ಪ್ರತಾಪ್ ಸಿಂಹ ಅವರ ಸಮ್ಮುಖದಲ್ಲಿ ನೀಡಿದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ ಡಾ.ಬಿ‌.ಎಸ್.ಕೃಷ್ಣಪ್ರಸಾದ್ ಅವರು ತಮ್ಮ ಒಂದು ತಿಂಗಳ ಪಿಂಚಣಿ ಹಣವನ್ನು 66,500 ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿಗಳ ಕೊವೀಡ್-19 ಪರಿಹಾರ ನಿಧಿಗೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: