ಪ್ರಮುಖ ಸುದ್ದಿ

ಆನ್ ಲೈನ್ ನಲ್ಲಿ ಕೊರೋನಾ ಜಾಗೃತಿ : ಸೋಂಕಿನ ಲಕ್ಷಣ ಇಲ್ಲದಿದ್ದರೂ ಎಚ್ಚರ ಅಗತ್ಯ : ಡಾ. ಗಣನಾಥ ಶೆಟ್ಟಿ ಎಕ್ಕಾರು ಸಲಹೆ

ರಾಜ್ಯ( ಮಡಿಕೇರಿ) ಏ.10 :- ಕೊಡಗಿನಲ್ಲಿ ಕೊರೋನಾ ಸೋಂಕಿನ ಲಕ್ಷಣ ಇಲ್ಲದಿದ್ದರೂ ಜನರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆಯಿಂದ ಇರುವಂತೆ ತಿಳಸಬೇಕಾಗಿದೆ. ತಮ್ಮ ತಮ್ಮ ಬಳಗದಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಹಾಗೂ ಕರ್ನಾಟಕ ಸರ್ಕಾರದ ಯುವಜನ ಸೇವಾ ಮತ್ತು ಕೀಡಾ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ಪದವಿ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕೋವಿಡ್-19 ಗೆ ಸಂಬಂದಿಸಿದಂತೆ ಆನ್ ಲೈನ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನ್‍ಲೈನ್ ಮೂಲಕ ಎನ್.ಎಸ್.ಎಸ್ ಸ್ವಯಂ ಸೇವಕ/ಸೇವಕಿಯರು ಜಾಗೃತಿ ಮೂಡಿಸಬೇಕು. ಈ ಮೂಲಕ ಕೋವಿಡ್-19 ರಿಂದ ಪಾರಾಗಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಸಂಯೋನಾಧಿಕಾರಿ ಡಾ.ನಾಗರತ್ನ ಅವರು ಮಾತನಾಡಿ ಕೊರೋನಾ ಎಲ್ಲಾ ಕಡೆಗೆ ಹರಡದಂತೆ ಸ್ವಯಂ ಜಾಗೃತಿ ಅಗತ್ಯ. ನಾವು ನಮ್ಮವರು ಎನ್ನುವುದಕ್ಕಿಂದ ಎಲ್ಲರ ಅರೋಗ್ಯ ರಕ್ಷಣೆ ಅವಶ್ಯಕ. ಇದಕ್ಕೆ ಎಲ್ಲಾರು ಜಾಗೃತರಾಗಬೇಕು ಎಂದರು. ಅಲ್ಲದೆ ಮಂಗಳೂರು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಯೋಜನೆ ವತಿಯಿಂದ ಉತ್ತಮ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಸಿದರು.
ಏಕಲವ್ಯ ಪ್ರಶಸ್ತಿ ವಿಜೇತರಾದ ಅರ್ಜುನ್ ದೇವಯ್ಯರವರು ಮಾತನಾಡಿ ಜಾಗತಿಕ ಮಟ್ಟದಲ್ಲಿ ಕೋರೋನಾ ವೈರಾಣು ಹೇಗೆ ಹರಡುತ್ತದೆ, ಜನ ಸಾಮಾನ್ಯರು ಯಾವ ರೀತಿಯಾಗಿ ಅರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು, ಕೊರೋನಾ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು ಎಂಬ ಬಗ್ಗೆ ಅರಿವು ಮೂಡಿಸಿದರು.
21 ದಿನದ ಲಾಕ್ ಡೌನ್ ನಮಗೆ ಸಮಸ್ಯೆ ಎಂದು ಭಾವಿಸಭಾರದು. ನಮ್ಮ ಮುಂದೆ ಅನೇಕ ಸವಾಲುಗಳಿವೆ. ಕೋರೋನಾ ಹೋಗಲಾಡಿಸುವಲ್ಲಿ ಯುವಜನರು, ವಿದ್ಯಾರ್ಥಿಗಳು ಏನು ಮಾಡಬೇಕು, ಏನನ್ನೂ ಮಾಡಬಾರದು ಎಂಬ ವಿಷಯಗಳನ್ನು ತಿಳಿಸಿದರು. ಜೊತೆಗೆ ಮುಕ್ತ ಸಂವಾದವನ್ನು ನಡೆಸಿದರು.
ಯೆನೆಪೋಯ ವಿಶ್ವವಿದ್ಯಾಲಯದ ವೈದ್ಯಾಧಿಕಾರಿ ಡಾ.ಅಶ್ವಿನಿ ಶೆಟ್ಟಿ ವಿದ್ಯಾರ್ಥಿಗಳಲ್ಲಿ ಕೋರೋನಾಕ್ಕೆ ಸಂಬಂಧಿಸಿದ ಅನೇಕ ಅನುಮಾನಗಳನ್ನು ದೂರಮಾಡಿ ಕೊರೋನಾ ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ತಿಳಸಿದರು.
ಈ ಸಂಧರ್ಭ ಅಧ್ಯಾಪಕರು, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಇದೊಂದು ವಿನೂತನ ಪ್ರಯತ್ನವಾಗಿದ್ದು ಸುಮಾರು 100 ಜನ ಅನ್‍ಲೈನ್‍ನಲ್ಲಿ ತರಬೇತಿ ಪಡೆದರು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ..
ಕಾವೇರಿ ವಿದ್ಯಾ ಸಂಸ್ಥೆ ಗೌರವ ಕಾರ್ಯದರ್ಶಿಗಳಾದ ಕೆ.ಜಿ ಉತ್ತಪ್ಪ, ಯೋಜನಾಧಿಕಾರಿಗಳಾದ ವನಿತ್ ಕುಮಾರ್ ಎಂ.ಎನ್, ರೀತಾ ಎನ್.ಪಿ, ಡಾ.ಪೂವಮ್ಮ, ಪವಿತ್ರ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: