ಪ್ರಮುಖ ಸುದ್ದಿ

ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ಸಿಎಂ ಬಿಎಸ್​ವೈಗೆ ಬೆಂಗಳೂರು ನಗರ ; ಎಸ್.ಟಿ.ಸೋಮಶೇಖರ್ ಮೈಸೂರು ಉಸ್ತುವಾರಿ

ರಾಜ್ಯ(ಬೆಂಗಳೂರು)ಏ.10:- ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ  ಹಲವು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, ಕರ್ನಾಟಕ ಸರ್ಕಾರದ ಸಚಿವಾಲಯ ಆದೇಶ ಹೊರಡಿಸಿದೆ.

ಕೊರೋನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರ ಕೂಡ ಸಮರೋಪಾದಿಯಲ್ಲಿ ಹತ್ತಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಎಲ್ಲ ಸಚಿವರಿಗೂ ಒಂದೊಂದು ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿದೆ.

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಹೊರಡಿಸಲಾಗಿದ್ದ ಆದೇಶವನ್ನು ಮಾರ್ಪಡಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ   ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, ಕರ್ನಾಟಕ ಸರ್ಕಾರದ ಸಚಿವಾಲಯ ಆದೇಶ ಹೊರಡಿಸಿದೆ.

ಬಿಎಸ್​ ಯಡಿಯೂರಪ್ಪ- ಬೆಂಗಳೂರು ನಗರ ಜಿಲ್ಲೆ, ಸಿ.ಎಸ್.ಅಶ್ವಥ್ ನಾರಾಯಣ- ರಾಮನಗರ, ಲಕ್ಷ್ಮಣ ಸವದಿ- ರಾಯಚೂರು, ಗೋವಿಂದ ಕಾರಜೋಳ- ಬಾಗಲಕೋಟೆ, ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ, ಆರ್.ಅಶೋಕ್- ಬೆಂಗಳೂರು ಗ್ರಾಮಾಂತರ, ಜಗದೀಶ್ ಶೆಟ್ಟರ್- ಬೆಳಗಾವಿ, ಧಾರವಾಡ (ಹೆಚ್ಚುವರಿ), ಬಿ.ಶ್ರೀರಾಮುಲು- ಚಿತ್ರದುರ್ಗ, ಎಸ್.ಸುರೇಶ್​ ಕುಮಾರ್ – ಚಾಮರಾಜನಗರ, ವಿ.ಸೋಮಣ್ಣ – ಕೊಡಗು, ಸಿ.ಟಿ.ರವಿ – ಚಿಕ್ಕಮಗಳೂರು, ಬಸವರಾಜ ಬೊಮ್ಮಾಯಿ – ಹಾವೇರಿ, ಉಡುಪಿ (ಹೆಚ್ಚುವರಿ), ಕೋಟಾ ಶ್ರೀನಿವಾಸ ಪೂಜಾರಿ – ದಕ್ಷಿಣ ಕನ್ನಡ, ಜೆ.ಸಿ. ಮಾಧುಸ್ವಾಮಿ – ತುಮಕೂರು, ಹಾಸನ (ಹೆಚ್ಚುವರಿ) ಸಿ.ಸಿ. ಪಾಟೀಲ – ಗದಗ, ಎಚ್.ನಾಗೇಶ್ – ಕೋಲಾರ, ಪ್ರಭು ಚವ್ಹಾಣ – ಬೀದರ್, ಯಾದಗಿರಿ (ಹೆಚ್ಚುವರಿ), ಶಶಿಕಲಾ ಜೊಲ್ಲೆ – ವಿಜಯಪುರ, ಶಿವರಾಮ್ ಹೆಬ್ಬಾರ್ – ಉತ್ತರ ಕನ್ನಡ, ಎಸ್​.ಟಿ.ಸೋಮಶೇಖರ್ – ಮೈಸೂರು, ಕೆ.ಸುಧಾಕರ್ – ಚಿಕ್ಕಬಳ್ಳಾಪುರ, ಕೆ.ಸಿ.ನಾರಾಯಣಗೌಡ – ಮಂಡ್ಯ, ಆನಂದಸಿಂಗ್- ಬಳ್ಳಾರಿ, ಬೈರತಿ ಬಸವರಾಜ – ದಾವಣಗೆರೆ, ಬಿ.ಸಿ. ಪಾಟೀಲ – ಕೊಪ್ಪಳ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: