ಮೈಸೂರು

ಬಿ ವೈ ವಿಜಯೇಂದ್ರ ಅಭಿಮಾನಿ ಬಳಗದ ವತಿಯಿಂದ ರಕ್ತದಾನ

ಮೈಸೂರು,ಏ.10:- ಕೊರೋನಾ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕಗಳಲ್ಲಿ ಉಂಟಾಗಿರುವ ರಕ್ತದ ತೀವ್ರ ಕೊರತೆ ನೀಗಿಸಲು ಬಿ ವೈ ವಿಜಯೇಂದ್ರ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಇಂದು  ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 20ಕ್ಕೂ ಹೆಚ್ಚು ಮಂದಿ ಯುವಕರು ರಕ್ತದಾನ ಮಾಡಿದ್ದಾರೆ,   ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮೈಸೂರು ಸಂಪೂರ್ಣ ಲಾಕ್ ಡೌನ್ ಆಗಿದ್ದು ರಕ್ತದಾನಕ್ಕೂ ಇದರ ಬಿಸಿ ತಟ್ಟಿದೆ.  ಸಾಂಸ್ಕೃತಿಕ ನಗರಿಯಲ್ಲಿ ರಕ್ತದಾನಿಗಳ ಸಂಖ್ಯೆ ತೀರಾ ಇಳಿಮುಖವಾಗಿದ್ದು ಇತರ ಚಿಕಿತ್ಸೆಗಳಿಗೂ ತೊಂದರೆಯಾಗುತ್ತಿದೆ .ಸದ್ಯ ರಾಜ್ಯ ಸರ್ಕಾರ ರಕ್ತದಾನ ಶಿಬಿರಗಳಿಗೂ ಬ್ರೇಕ್ ಹಾಕಿದ್ದು .ಪ್ರತಿದಿನ ಶೇ 60ರಷ್ಟು ರಕ್ತದ ಕೊರತೆ ಎದುರಿಸುವಂತಾಗಿದೆ .ಇದೇ ಸ್ಥಿತಿ ಮುಂದುವರಿದರೆ ಮುಂದೆ ವೈದ್ಯಕೀಯ ಕ್ಷೇತ್ರದಲ್ಲೂ ಅಪಾಯ ಸಂಭವಿಸುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ .

ಮೈಸೂರಿನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ನಡೆಯುವ ಚಿಕಿತ್ಸೆಗಳಿಗೆ ಸುಮಾರು 300 ರಿಂದ 400 ಬಾಟಲ್ ಗಳಷ್ಟು ರಕ್ತ  ಬೇಕಾಗುತ್ತದೆ ಈ ನಿಟ್ಟಿನಲ್ಲಿ ಬಿ.ವೈ.ವಿಜಯೇಂದ್ರ ಅವರ 20 ಕ್ಕೂ ಹೆಚ್ಚು ಅಭಿಮಾನಿಗಳು ಬಂದು ರಕ್ತದಾನ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಈಗಾಗಲೇ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಲು  ಮನೆಯಿಂದ ಕರೆದುಕೊಂಡು ಹೋಗಿ ರಕ್ತದಾನದ ನಂತರ ಸುರಕ್ಷಿತವಾಗಿ ಅವರ ಮನೆಗೆ ತಲುಪಿಸುವ ಉತ್ತಮ‌ ವ್ಯವಸ್ಥೆ ಇದೆ. ಅಲ್ಲದೇ ರಕ್ತದಾನಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಇದರಿಂದ ಮುಂದೆ ಅವರಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅಗತ್ಯವಿದ್ದಾಗ ಪ್ರಮಾಣಪತ್ರ ತೋರಿಸಿ ಉಚಿತವಾಗಿ ರಕ್ತ ಪಡೆಯಬಹುದು ಎಂದರು.

ರಕ್ತದಾನಿಗಳು  ಮೊ.ಸಂ 9243781900, 9243781901 ಸಂಪರ್ಕಿಸಬಹುದು ಎಂದರು.

ಬಿ.ವೈ.ವಿಜೇಂದ್ರ ಅಭಿಮಾನಿ ಬಳಗದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ನಮ್ಮ ಯುವನಾಯಕರಾದ ಬಿ.ವೈ.ವಿಜೇಂದ್ರಣ್ಣ   ಆದೇಶದ ಮೇರೆಗೆ ನಮ್ಮ ಸಂಘಟನೆಯ ವತಿಯಿಂದ ಉಚಿತ ಔಷಧಿಗಳನ್ನು ನೀಡುತ್ತಿದ್ದೇವೆ ಈಗಾಗಲೇ ಡಯಾಲಿಸಿಸ್ ಅಗತ್ಯ ಉಳ್ಳವರು, ಗರ್ಭಿಣಿಯರು ಮತ್ತು ರಕ್ತದ ಅಗತ್ಯ ಇರುವವರಿಗೆ ರಕ್ತದ ಕೊರತೆ ಇದ್ದು ಅದನ್ನು ಮನಡಂಡು ನಮ್ಮ ಸಂಘಟನೆಯಿಂದ ರಕ್ತದಾನ ಮಾಡಲಾಗಿದೆ. ಇನ್ನುಮುಂದೆ ಪ್ರತಿದಿನ ಸ್ವಯಂಪ್ರೇರಿತರಾಗಿ ಎಲ್ಲ ಯುವಕರು ರಕ್ತದಾನ ಮಾಡಿ-ಜೀವ ಉಳಿಸಿ ಎಂದು  ಮನವಿ ಮಾಡಿದರು.‌

ಜೀವಧಾರ ರಕ್ತನಿಧಿ ಕೇಂದ್ರದ ವೈದ್ಯರುಗಳಾದ ಡಾ.ಕಿರಣ್,ಡಾ.ಭಾರತಿ, ಡಾ.ರಾಧಾ. ಬಿ ವೈ.ವಿಜಯೇಂದ್ರ ಅಭಿಮಾನಿ ಬಳಗದ  ಲೋಹಿತ್,ವಿಕ್ರಮ್ ಅಯ್ಯಂಗಾರ್, ಕಡಕೊಳ ಜಗದೀಶ್,ಜಯಸಿಂಹ, ಶ್ರೀನಿವಾಸ ರಾಕೇಶ್, ಶ್ರೀನಿವಾಸ ಪ್ರಸಾದ್,ಸುಚೀಂದ್ರ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: