ಮೈಸೂರು

ಎಲ್ಲರಿಗೂ ರೇಷನ್ ಸರಿಯಾಗಿ ವಿತರಿಸುವ ಕೆಲಸ ಇನ್ನೆರಡು ದಿನದಲ್ಲಿ ಶುರುವಾಗಲಿದೆ : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಏ.10:-  ಕೊರೋನಾ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ಉತ್ತಮವಾದ ಕೆಲಸ ಮಾಡಿದೆ. ಎಲ್ಲರಿಗೂ ರೇಷನ್ ಸರಿಯಾಗಿ ವಿತರಿಸುವ ಕೆಲಸ ಇನ್ನೆರಡು ದಿನದಲ್ಲಿ ಶುರುವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ.ಸೋಮಶೇಖರ್ ತಿಳಿಸಿದರು.

ಉಸ್ತುವಾರಿ ಸಚಿವರಾಗಿ ನೇಮಕವಾದ ಬಳಿಕ  ಇಂದು ಮೈಸೂರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಯಾರು ರೇಷನ್ ಕಾರ್ಡ್ ಗೆ  ಅಪ್ಲೈ ಮಾಡಿದ್ದರೋ  ಅವರಿಗೂ ರೇಷನ್‌ ಕೊಡಲಾಗುವುದು. ಇದಕ್ಕೆ‌ ಜಿಲ್ಲಾಧಿಕಾರಿಗಳು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ  ಸರಿಯಾದ ರೇಷನ್‌ ಸಿಗುವ ಉದ್ದೇಶ ಇದಾಗಿದೆ ಎಂದರು.

ನಾಳೆ ಎಪಿಎಂಸಿ ಹಾಗೂ ನಂಜನಗೂಡಿಗೆ ಭೇಟಿ ಕೊಡಲಿದ್ದೇನೆ. ಈಗಾಗಲೇ ಜಿಲ್ಲಾಡಳಿತ ಎಲ್ಲ ಕೆಲಸ ಮಾಡ್ತಿದೆ. ನಾಳೆ ಜನಪ್ರತಿನಿಧಿಗಳ ಸಭೆ ಕರೆದಿದ್ದೇನೆ. ಅವರ ಬಳಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಅವರ ಜೊತೆ ಇರುತ್ತೇನೆ. ಕೊರೋನಾ ಬಗ್ಗೆ ಸಂಪೂರ್ಣ ಸಹಕಾರದೊಂದಿಗೆ ಕೆಲಸ ಮಾಡುತ್ತೇನೆ ಎಂದರು.

ಮೈಸೂರಿನಲ್ಲಿ ಸೀಲ್ ಡೌನ್ ಮಾಡೋ ವಿಚಾರಕ್ಕೆ ಪ್ರತಿಕ್ರಿಯಿಸಿ ಸದ್ಯ ನಂಜನಗೂಡಿನಲ್ಲಿ‌ ಎರಡು ಬಡಾವಣೆ ಮಾತ್ರ ಮಾಡಿದ್ದೇವೆ. ಮುಂದೆ ಪರಿಸ್ಥಿತಿ ನೋಡಿ ಬೇರೆಡೆಗೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: