ಮೈಸೂರು

ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಲು ಮನವಿ : ಯುವ ವಕೀಲ ಎಸ್.ಪಿ.ಮಂಜುನಾಥ್

ಮೈಸೂರು, ಏ.11:- ನಗರದ ಯುವ ವಕೀಲ ಹಾಗೂ ಸಮಾಜ ಸೇವಕರಾದ ಎಸ್.ಪಿ.ಮಂಜುನಾಥ್‍ ಕೋವಿಡ್-19 ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ಇಡೀ ವಿಶ್ವವೇ ಲಾಕ್‍ಡೌನ್ ವ್ಯವಸ್ಥೆಯಲ್ಲಿ ಬಳಲಿ, ತತ್ತರಿಸುತ್ತಿದೆ. ಈ ಸಂದಿಗ್ಧ, ಕಠಿಣ ಪರಿಸ್ಥಿತಿಯಲ್ಲಿ ರೋಗಾಣುವನ್ನು ತಡೆಗಟ್ಟಲು ಶ್ರೀಸಾಮಾನ್ಯರು ಹೆಚ್ಚಿನ ರೀತಿಯಲ್ಲಿ ಸರ್ಕಾರದ ಅಗತ್ಯ ಕ್ರಮಗಳನ್ನು ಪಾಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಮೈಸೂರು ಜಿಲ್ಲೆ ಕೊರೊನಾ ವೈರಾಣುವಿನಿಂದ ಅತಿ ಸೂಕ್ಷ್ಮ ವಲಯವಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ನಿರ್ಲಕ್ಷ್ಯ ತೋರದೇ ಸರ್ಕಾರದ ಆದೇಶಗಳನ್ನು ಜವಾಬ್ದಾರಿಯುತವಾಗಿ ಚಾಚೂ ತಪ್ಪದೇ ಪಾಲಿಸುತ್ತಾ, ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದ ಅವರು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು, ಕೃಷಿ ವಲಯದಲ್ಲಿ ರೈತಾಪಿ ವರ್ಗ ತರಕಾರಿಗಳನ್ನು ತರಲು ಹಾಗೂ ಮಾರಾಟ ಮಾಡಲು ಅಗತ್ಯ ಕ್ರಮಗಳನ್ನು ಸರ್ಕಾರವು ಕೈಗೊಂಡು ಅವರಿಗೆ ಮುಕ್ತವಾಗಿ ಮಾರಾಟ ಮಾಡಲು ವ್ಯವಸ್ಥೆಯಲ್ಲಿ ಕಲ್ಪಿಸಿಕೊಡಬೇಕೆಂದು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜನ ಸಾಮಾನ್ಯರು ಅದರಲ್ಲೂ ನಿರ್ಗತಿಕರು, ಅಸಂಘಟಿತರು, ದಿನಗೂಲಿ ಕಾರ್ಮಿಕರಿಗೆ ಸಹಾಯ ನೀಡಲು ಸರ್ಕಾರ ಹಾಗೂ ಜಿಲ್ಲಾಡಳಿತ ಅವಿರತವಾಗಿ ಶ್ರಮಿಸುತ್ತಿದ್ದರೂ ಅದು ಸಾಲದಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಮುಂದಾಗಬೇಕೆಂದು ಮನವಿ ಮಾಡಿರುವ ಯುವ ವಕೀಲರು, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ತೆಗೆದುಕೊಂಡಿರುವ ಅಗತ್ಯ ಕ್ರಮಗಳಿಗೆ ಹಾಗೂ ಕಾನೂನು ಕ್ರಮಕ್ಕೆ ಎಲ್ಲರೂ ತಲೆಬಾಗಿ, ಸ್ಪಂದಿಸಿ ಹೆಚ್ಚಿನ ಸಹಕಾರ ನೀಡಬೇಕೆಂದು ತಿಳಿಸಿ, ಅಗತ್ಯವಾಗಿ ಬೇಕಾಗಿರುವ ಮಾಸ್ಕ್ ಹಾಗೂ ಸ್ಯಾನಿಟೈಸರ್ ಅತ್ಯುತ್ತಮ ಗುಣಮಟ್ಟದಲ್ಲಿ ವಿತರಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಜಿಲ್ಲಾ ಹಾಗೂ ಆರೋಗ್ಯ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ತುರ್ತು ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಯುವ ವಕೀಲ ಎಸ್.ಪಿ.ಮಂಜುನಾಥ್ ಒತ್ತಾಯಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: