ಮೈಸೂರು

ಹಸಿದವರ ಪಾಲಿಗೆ ಅನ್ನದಾತರಾದ ಪೊಲೀಸರು

ಮೈಸೂರು,ಏ.12:- ಭಯಪಡಬೇಡಿ ನಿಮ್ಮೊಂದಿಗೆ ನಾವಿದ್ದೇವಿ ಅಂತ ಹಗಲಿರುಳು ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಕಂಡ್ರೇ ಕೆಲವರಿಗೆ ಆಗೋದಿಲ್ಲ. ಅವರು ಸರಿ ಇಲ್ಲ, ರಸ್ತೆಗಿಳಿದ್ರೇ ಸಾಕು ಲಾಠಿ ಚಾರ್ಜ್ ಮಾಡ್ತಾರೆ. ಅವರಿಗೆ ಒಳ್ಳೆ ಮನಸ್ಸಿಲ್ಲ ಅಂತ ಮೂಗು ಮುರಿಯೋರೆ ಹೆಚ್ಚು. ಇಂದು ಮೈಸೂರು ಪೊಲೀಸರು ಹಸಿದವರ ಪಾಲಿಗೆ ಅನ್ನದಾತರಾಗಿದ್ದಾರೆ.

ಕೋವಿಡ್ 19 ನಿಂದ ಭಾರತ ಸಂಪೂರ್ಣ ಲಾಕ್ ಡೌನ್ ಆಗಿದ್ದು ದಿನಗೂಲಿಯನ್ನೇ ನಂಬಿ ಬದುಕುತ್ತಿದ್ದ ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆಹಾಡಿಯ ನಿವಾಸಿಗಳಿಗೆ ಮೈಸೂರು ಪೊಲೀಸರು ಮಾಸ್ಕ್ ಹಾಗೂ ಆಹಾರ ಕಿಟ್ ವಿತರಿಸಿದ್ದಾರೆ‌.

ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್,ಜಿಲ್ಲಾ‌ ಪೊಲೀಸ್ ಅಧೀಕ್ಷಕ. ಸಿ.ಬಿ.ರಿಷ್ಯಂತ್ ರವರು ಬಳ್ಳೆಹಾಡಿಯ ನಿವಾಸಿಗಳಿಗೆ ಕಿಟ್ ವಿತರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: