ಮೈಸೂರು

ಕುಂಟುತ್ತ ಸಾಗುತ್ತಿದೆ ರಸ್ತೆ ಕಾಮಗಾರಿ : ವಾಹನ ಸವಾರರಿಂದ ಹಿಡಿಶಾಪ

ಈಗ ಮೊದಲಿನ ಹಾಗಿಲ್ಲ. ಎಲ್ಲವೂ ಡಿಜಿಟಲ್ ಯುಗ. ಎಲ್ಲರೂ ಆಧುನಿಕತೆಯತ್ತ ಮನಸೋಲುತ್ತಿದ್ದಾರೆ. ಎಲ್ಲರಿಗೂ ಮೂಲಭೂತ ಸೌಲಭ್ಯಗಳ  ಜೊತೆ ಆಧುನೀಕರಣದ ಅವಶ್ಯಕತೆಯಿದೆ. ಅದರಲ್ಲೂ ಎಲ್ಲವೂ ಇದ್ದು ಓಡಾಡೋ ರಸ್ತೆಗಳೇ ಸರಿ ಇರದಿದ್ದರೆ ಹೇಗೆ? ಇಲ್ಲೂ ಹಾಗೇಯೇ ಆಗಿದೆ. ಹೆಚ್.ಡಿ.ಕೋಟೆ ತಾಲೂಕಿನ ಜಿ.ಬಿ.ಸರಗೂರಿನಿಂದ ಮೈಸೂರು ಮಾರ್ಗವಾಗಿ ಮೈಸೂರು ಕಡೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದ್ದು ಜನತೆ ಹಿಡಿಶಾಪ ಹಾಕುತ್ತಿದ್ದಾರೆ.

ರಸ್ತೆ ಕಾಮಗಾರಿ ಆರಂಭವಾಗಿ ಆರು ತಿಂಗಳೆ ಕಳೆದಿದ್ದರೂ ಮುಗಿಯುವ ಲಕ್ಷಣಗಳು ಮಾತ್ರ ಕಾಣಿಸುತ್ತಿಲ್ಲ.  ರಸ್ತೆ ಕಾಮಗಾರಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ  ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಜಿ.ಬಿ.ಸರಗೂರಿನಿಂದ ಡಿ.ಎಂ.ಜಿ.ಹಳ್ಳಿ ಗೇಟ್ ನ ವರೆಗೆ ಸುಮಾರು 3 ಕಿ.ಮೀ.ರಸ್ತೆ ಕಾಮಗಾರಿಯನ್ನು ಆರು ತಿಂಗಳ ಹಿಂದೆಯೇ ಕೈಗೊಳ್ಳಲಾಗಿದೆ. ಆದರೆ ಈಗ ರಸ್ತೆ ಕಾಮಗಾರಿಯು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಇದರಿಂದಾಗಿ ವಾಹನಗಳು  ಅಪಘಾತಕ್ಕಿಡಾಗುತ್ತಿದ್ದು,ಶೀಘ್ರದಲ್ಲಿ ರಸ್ತೆ ಕಾಮಗಾರಿ ಪೂರೈಸುವಂತೆ ಸ್ಥಳೀಯರಿಂದ ಒತ್ತಾಯ ಕೇಳಿಬಂದಿದೆ.

ರಸ್ತೆಯಲ್ಲಿ ಜಲ್ಲಿಕಲ್ಲುಗಳು ಹರಡಿಕೊಂಡಿದ್ದು ವಾಹನ ಸಾಗುವಾಗ ಎದ್ದು ಇನ್ನೊಬ್ಬರಿಗೆ ತಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ವಾಹನ ಸಾಗಿದ ತಕ್ಷಣ ಅಸಾಧ್ಯವಾದ ಧೂಳು ಆವರಿಸಿಕೊಳ್ಳುತ್ತದೆ ಎನ್ನುವುದು ಸ್ಥಳೀಯರ ಅಳಲು. ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿಯಾರೇ ಎಂಬುದನ್ನು ಕಾದುನೋಡಬೇಕಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: