ಮೈಸೂರು

ನಿರಾಶ್ರಿತರಿಗೆ ಅಶೋಕ ಪುರಂ ಯುವ ಸಮೂಹದಿಂದ ಆಹಾರ ವಿತರಣೆ : ಮನರಂಜನೆ ನೀಡಿದ ಅಮ್ಮರಾಮಚಂದ್ರ ತಂಡ

ಮೈಸೂರು,ಏ.14:- ಮೈಸೂರಿನಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ಹಲವು ಕಡೆ ಆಶ್ರಯ ಕಲ್ಪಿಸಲಾಗಿದ್ದು, ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿಯೂ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ ನಿರಾಶ್ರಿತರಿಗೆ, ನಿರ್ಗತಿಕರಿಗೆ ದಿನ ನಿತ್ಯ ಆಹಾರ ವಿತರಿಸಲಾಗುತ್ತಿದ್ದು, ಅನೇಕ ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ಇಂದು ಅಂಬೇಡ್ಕರ್ ಅವರ 129 ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಅಶೋಕ ಪುರಂ ಯುವ ಸಮೂಹವು ಆಹಾರವನ್ನು ವಿತರಿಸಿದೆ.

ಇಲ್ಲಿ ತಾತ್ಕಾಲಿಕವಾಗಿ ತಂಗಿರುವ ನಿರಾಶ್ರಿತರಿಗೆ ಮನೋರಂಜನೆಯನ್ನು ಕೂಡಾ ನೀಡಲಾಗುತ್ತಿದೆ. ಮೈಸೂರಿನ ಖ್ಯಾತ ಕಲಾವಿದ ಅಮ್ಮ ರಾಮಚಂದ್ರ ತಂಡವು ನಿರಾಶ್ರಿತರಿಗೆ ಜಾನಪದ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: