ದೇಶಪ್ರಮುಖ ಸುದ್ದಿ

ತಾಜ್‍ಮಹಲ್ ಸ್ಫೋಟಿಸುವ ಐಸ್ಎಸ್ ಉಗ್ರರ ಯೋಜನೆ ವೆಬ್‍ಸೈಟಲ್ಲಿ ಪ್ರಕಟ

ನವದೆಹಲಿ : ವಿಶ್ವವಿಖ್ಯಾತ ಆಗ್ರಾದ ತಾಜ್‍ಮಹಲ್‍ಗೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ISIS) ಉಗ್ರರು ದಾಳಿ ನಡೆಸಲು ಸಿದ್ಧತೆ ನಡೆಸಿರುವುದಾಗಿ ವೆಬ್‍ಸೈಟ್‍ವೊಂದರಲ್ಲಿ ಪ್ರಕಟಿಸಲಾಗಿದೆ.

ಯಾವೆಲ್ಲಾ ರೀತಿ ದಾಳಿ ಮಾಡಬಹುದು ಎಂಬುದರ ಕುರಿತು ರಚನೆ ಮಾಡಲಾದ ಚಿತ್ರವನ್ನು ಇಸಿಸ್ ಪರವಾದ ವೆಬ್‍ಸೈಟ್‍ವೊಂದರಲ್ಲಿ ಮಾರ್ಚ್ 14 ರಂದು ಪ್ರಕಟಿಸಲಾಗಿದ್ದು, ಅಹ್ವಾಲ್ ಉಮ್ಮಾತ್ ಎಂಬಾತನಿಂದ ದಾಳಿ ಕುರಿತ ಚಿತ್ರ ರಚನೆಯಾಗಿದೆ ಎಂದು ತಿಳಿದುಬಂದಿದೆ.

ಭಾರತ ಮೇಲೆ ಇಸಿಸ್ ಉಗ್ರರು ದಾಳಿ ಬೆದರಿಕೆ ಕರೆ ನೀಡುತ್ತಿರುವುದು ಇದು ಮೊದಲೇನಲ್ಲ. ಮಾರ್ಚ್ 8 ರಂದು ಲಖನೌ ಮನೆಯೊಂದರಲ್ಲಿ ಅಡಗಿದ್ದ ಶಂಕಿತ ಉಗ್ರ ಸೈಫುಲ್ಲಾ ಹತ್ಯೆಯ ಬಳಿಕ ಮತ್ತೋರ್ವ ಇಸಿಸ್ ಪರ ಉಗ್ರ ಭಾರತದಲ್ಲಿ ದಾಳಿ ಬೆದರಿಕೆಯ ಸಂದೇಶವನ್ನು ಟೆಲಿಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದ.

ಗುಪ್ತಚರ ಇಲಾಖೆ ವರದಿ ಪ್ರಕಾರ 75 ಭಾರತೀಯರು ಈಗಾಗಲೇ ಇಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಮೂಲದವರೇ ಹೆಚ್ಚಾಗಿದ್ದಾರೆ ಅಧಿಕಾರಿಗಳು ಹೇಳಿದ್ದಾರೆ.

(ಎನ್‍.ಬಿ.ಎನ್‍)

Leave a Reply

comments

Related Articles

error: