ಮೈಸೂರು

ಜನ್ಮ ದಿನಾಚರಣೆ ಪ್ರಯುಕ್ತ ಸಂಸಾರ ಸಮೇತ ಆಗಮಿಸಿ ರಕ್ತದಾನ ಮಾಡಿದ ನೀರಾವರಿ ಇಲಾಖೆಯ ಸರ್ಕಾರಿ ನೌಕರ ಎಂ.ಸುಧೀರ್

ಮೈಸೂರು,ಏ.14:- ನೀರಾವರಿ ಇಲಾಖೆಯ ಸರ್ಕಾರಿ ನೌಕರರಾದ ಎಂ ಸುಧೀರ್  ಅವರು ತಮ್ಮ  ಜನ್ಮ ದಿನಾಚರಣೆಯನ್ನು ಪತ್ನಿ ಮಮತಾ, ಪುತ್ರ ಸೌರವ್, ಪುತ್ರಿ  ಸುಮನಾ ಅವರೊಂದಿಗೆ  ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ  ಸ್ವಯಂ ಪ್ರೇರಿತವಾಗಿ  ಸಂಸಾರ ಸಮೇತ  ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ವಿಶೇಷವಾಗಿ ಆಚರಿಸಿಕೊಂಡರು.

ಕುಟುಂಬ ಸದಸ್ಯರ ಜೊತೆ ರಕ್ತದಾನ ಮಾಡಿದ ಮಾತನಾಡಿದ ಎಂ.ಸುಧೀರ್ ಇಂದು ನನ್ನ ಜನ್ಮದಿನದ ಪ್ರಯುಕ್ತ ಏನಾದರೊಂದು ಸಮಾಜ ಸೇವೆ ಮಾಡಬೇಕೆಂದು ಕುಟುಂಬದವರೊಂದಿಗೆ ಚರ್ಚಸಿದಾಗ ಅವರೆಲ್ಲಾ ಜೀವದಾನವಾಗಿರುವ ರಕ್ತದಾನ ಮಾಡೋಣವೆಂದು ಸಲಹೆ ನೀಡಿದರು. ಹಾಗೆಯೇ ರಕ್ತದಾನ-ಜೀವದಾನ ವೆಂಬ ನಾಣ್ಣುಡಿ  ಇದೆ.  ರಕ್ತದಾನ ಕುರಿತು ಇನ್ನೂ ಅನೇಕ ಮೂಢನಂಬಿಕೆಗಳು ಜನರ ಮನಸ್ಸಿನಲ್ಲಿದೆ. ಆದರೆ ಅವೆಲ್ಲವೂ ಸುಳ್ಳಾಗಿದ್ದು ರಕ್ತದಾನ ಮಾಡಿದರೆ ದೇಹವು ನವನವೀನವಾಗಿ ಹೃದಯದ ಒತ್ತಡ ಕಡಿಮೆ ಯಾಗಲಿದ್ದು ಕೊರೋನಾ ದಂತಹಾ ಕಠಿಣ ಸಮಯದಲ್ಲಿ ನಾಲ್ಕಾರು ರೋಗಿಗಳಿಗೆ, ಗರ್ಭಿಣಿಯರಿಗೆ ಜೀವಕೊಡುವ ವರದಾನವಾಗಲಿದೆ. ಅದಕ್ಕಾಗಿ ನಮ್ಮ ಕುಟುಂಬದವರೆಲ್ಲಾ ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡಿದ್ದೇವೆ ಎಂದು ತಿಳಿಸಿದರು.

ಜೀವಧಾರ ರಕ್ತನಿಧಿಯ ಮುಖ್ಯಸ್ಥರಾದ ಗಿರೀಶ್   ಮಾತನಾಡಿ ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ಪ್ರತಿದಿನ 300-400 ಯೂನಿಟ್ ರಕ್ತದ ಅವಶ್ಯಕತೆ ಇದ್ದು, ಈಗ ಕೊರೋನಾ ಮಾರಿ ಹಿನ್ನೆಲೆಯಲ್ಲಿ ರಕ್ತದಾನಿಗಳು ಬರಲು ಹಿಂಜರಿಯುತ್ತಿದ್ದಾರೆ.  ಇಂತಹ ಸಮಯದಲ್ಲಿ ಸುಧೀರ್ ಅವರ ಕುಟುಂಬವರ್ಗದವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ.  ಹೀಗೆಯೇ ಮೈಸೂರಿನ ಹಲವು ನಾಗರಿಕರು ಯುವಕರು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಅವಶ್ಯಕತೆ ಇರುವ ರೋಗಿಗಳಿಗೆ ಗರ್ಭಿಣಿ ಯರಿಗೆ ನೆರವಾಗಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: