ಪ್ರಮುಖ ಸುದ್ದಿಮೈಸೂರು

ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿ ಮಾಡಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಏ.15:- ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎಸ್ ಟಿ.ಸೋಮಶೇಖರ್ ಅವರು ಇದೇ ಮೊದಲ ಬಾರಿಗೆ ಇಂದು ಮೈಸೂರು ಅರಮನೆಗೆ ಭೇಟಿ ನೀಡಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರನ್ನು  ಭೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸಿದರು.

ನಗರದ ಅಂಬಾವಿಲಾಸ ಅರಮನೆಯಲ್ಲಿ  ರಾಜಮಾತೆಯವರನ್ನು ಭೇಟಿ ಮಾಡಿದ  ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದೊಂದು ಸೌಹಾರ್ದ ಭೇಟಿಯಷ್ಟೇ. ಉಸ್ತುವಾರಿ ಸಚಿವರಾದ ನಂತರ ರಾಜವಂಶಸ್ಥರನ್ನು  ಮೊದಲು ಭೇಟಿ ಮಾಡಿದ್ದು, ಮೈಸೂರಿನ ಅಭಿವೃದ್ಧಿ ಬಗ್ಗೆ ಸಲಹೆ ಸಹಕಾರ ಕೋರಿದ್ದೇವೆ. ಸಾಕಷ್ಟು ಮಾಹಿತಿ ನೀಡಿದ್ದಾರೆ. ಅವರು ಕೂಡ ಹಲವು ಕ್ರಮಗಳನ್ನು ತೆಗೆದು ಕೊಂಡಿದ್ದಾರೆ. ನಮ್ಮ ಸರ್ಕಾರದ ಕೆಲಸಗಳನ್ನು ಹೇಳಿದ್ದೇವೆ. ಎರಡನೇ ಹಂತದ ಲಾಕ್ ಡೌನ್ ಹಿನ್ನಲೆಯಲ್ಲಿ ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುತ್ತೇವೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗದುಕೊಳ್ಳಲಾಗುವುದು ಎಂದರು.

ಸಚಿವರ ಭೇಟಿ ಬಳಿಕ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾತನಾಡಿ ಉಸ್ತುವಾರಿ ಸಚಿವರು ಭೇಟಿ ಮಾಡಿದ್ದರು. ಜಿಲ್ಲಾಡಳಿತ ದಿಂದ ತೆಗದುಕೊಂಡ ಕ್ರಮಗಳನ್ನು ತಿಳಿಸಿದರು. ಪಡಿತರ ವ್ಯವಸ್ಥೆ ಬಗ್ಗೆ ಚರ್ಚೆ ಮಾಡಿದ್ದಾರೆ. ನಮ್ಮ ಸಲಹೆ ಏನು ಇಲ್ಲ. ಎಲ್ಲ ರೀತಿಯ ಕೆಲಸಗಳನ್ನು ಮಾಡಿದ್ದಾರೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಮ್ಮ ಸಂಸ್ಥೆ ಯಿಂದ ಡಿಸ್ ಇನ್ಪೆಕಶ್ಷನ್  ಟನಲ್ ಗಳನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲಾಡಳಿತ ಸಂಪೂರ್ಣ ಕೆಲಸ ಮಾಡಿದೆ. ಈ ಸಮಸ್ಯೆ ಯನ್ನು ಸಮರ್ಥವಾಗಿ ಜಿಲ್ಲಾ ಅಧಿಕಾರಿಗಳು ನಿವರ್ಹಣೆ ಮಾಡಿದ್ದಾರೆ. ಕೊರೋನಾ ಸೋಂಕು ಜಿಲ್ಲಾಡಳಿತ ದ ಶ್ರಮದಿಂದ ಹತೋಟಿಗೆ  ಬಂದಿದೆ ಎಂದರು.

ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ,  ಅರಮನೆ ಆಡಳಿತ ಮಂಡಳಿ ನಿರ್ದೇಶಕರು, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: