ದೇಶಪ್ರಮುಖ ಸುದ್ದಿ

ಪಾಕಿಸ್ತಾನದಲ್ಲಿ ಭಾರತದ ಮುಸ್ಲಿಂ ಧಾರ್ಮಿಕ ಮುಖಂಡರು ನಾಪತ್ತೆ

ನವದೆಹಲಿ:  ಭಾರತದ ಇಬ್ಬರು ಮುಸ್ಲಿಂ ಧಾರ್ಮಿಕ ಮುಖಂಡರು ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದಾರೆ.  ನವದೆಹಲಿಯ ನಿಜಾಮುದ್ದೀನ್ ದರ್ಗಾದ ಧಾರ್ಮಿಕ ನಾಯಕ ಸಯೀದ್ ಆಸೀಫ್ ಅಲಿ ನಿಜಾಮಿ ಅವರು ಇವರಲ್ಲೊಬ್ಬರು.

ಮುಖಂಡರು ನಾಪತ್ತೆಯಾಗಿರುವ ವಿಷಯವನ್ನು ಪಾಕಿಸ್ತಾನದ ಸರ್ಕಾರದ ಗಮನಕ್ಕೆ ತರುವುದಾಗಿ ಭಾರತ ಸರ್ಕಾರ ಭರವಸೆ ನೀಡಿದೆ ಎಂದು ಸಯೀದ್ ಆಸೀಫ್ ಅಲಿ ನಿಜಾಮಿ ಅವರ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನನ್ನ ತಂದೆ ಸಯೀದ್ ಆಸೀಫ್ ಅಲಿ ನಿಜಾಮಿ (80) ಹಾಗೂ ಅವರ ಸಂಬಂಧಿ ನಜೀಮ್ ನಿಜಾಮಿ ಇಬ್ಬರೂ ಲಾಹೋರ್ ಹಾಗೂ ಕರಾಚಿ ವಿಮಾನ ನಿಲ್ದಾಣಗಳಿಂದ ನಾಪತ್ತೆಯಾಗಿದ್ದಾರೆ. ಮಾ.6 ರಂದು ಕರಚಿಗೆ ಹೋದರು ನಂತರ  ಲಾಹೋರ್ ನಲ್ಲಿರುವ ಬಾಬ ಫರಿದ್ ದರ್ಗಾಗೆ ಚಾದರ್ ಸಮರ್ಪಿಸಲು ಇಬ್ಬರೂ ಲಾಹೋರ್ ಗೆ ತೆರಳಿದರು.

ಮಾ.14 ರಂದು ಚಾದರ್ ಅರ್ಪಿಸಿದ ಬಳಿಕ ಲಾಹೋರ್ ವಿಮಾನ ನಿಲ್ದಾಣಕ್ಕೆ ಸಂಜೆ 4:30 ರ ವೇಳೆಗೆ ಬಂದಿದ್ದಾರೆ. ಲಾಹೋರ್ ವಿಮಾನ ನಿಲ್ದಾಣದಲ್ಲಿ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಇಬ್ಬರನ್ನೂ ಕರೆದೊಯ್ದಿದ್ದಾರೆ. ಆದರೆ ಈಗ ನಾಪತ್ತೆಯಾಗಿದ್ದು ಅವರ ಫೋನ್ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸಯೀದ್ ಆಸೀಫ್ ಅಲಿ ನಿಜಾಮಿ ಕುಟುಂಬದವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಈ ವಿಷಯವನ್ನು ಪಾಕಿಸ್ತಾನದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ನಾಪತ್ತೆಯಾಗಿರುವ ಇಬ್ಬರನ್ನೂ ಪತ್ತೆ ಮಾಡಲು ಯತ್ನಿಸುತ್ತಿದೆ.

(ಎನ್‍.ಬಿ.ಎನ್)

Leave a Reply

comments

Related Articles

error: