ಮೈಸೂರು

ಬಿ ವೈ ವಿಜಯೇಂದ್ರ  ಅಭಿಮಾನಿಗಳ ಬಳಗದಿಂದ ನಿರಾಶ್ರಿತರಿಗೆ ಊಟ ವಿತರಣೆ

ಮೈಸೂರು,ಏ.15:- ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದ್ದು ಅಷ್ಟೇ ಮಟ್ಟದಲ್ಲಿ ನಿರಾಶ್ರಿತರ ಸಂಖ್ಯೆಯು ಹೆಚ್ಚುತ್ತಿದ್ದು, ಊಟ ಇಲ್ಲದೆ ನಿರಾಶ್ರಿತರು ಹತಾಶರಾಗಿದ್ದಾರೆ.

ನಿರಾಶ್ರಿತರ ನೆರವಿಗೆ ವಿವಿಧ ಸಂಘ ಸಂಸ್ಥೆಗಳು ಮಿಡಿದಿದ್ದು  ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿಗಳ ಬಳಗದಿಂದಲೂ ಪ್ರತಿ‌ನಿತ್ಯ ಸಾವಿರಾರು ನಿರಾಶ್ರಿತರಿಗೆ ಊಟವನ್ನು ವಿತರಣೆ ಮಾಡುತ್ತಿದ್ದಾರೆ. ಸ್ವತಃ ಬಳಗದವರೇ ಅಡುಗೆ ತಯಾರಿಸಿ ಯಾರಿಗೂ ಯಾವುದೇ ತೊಂದರೆ ಆಗದಂತೆ ಉತ್ತಮ ಗುಣಮಟ್ಟದ ಊಟ ತಯಾರಿಸಿ ಪ್ರತಿನಿತ್ಯ ನಗರದ ವಿವಿಧ ಭಾಗದಲ್ಲಿ ಇಂದೂ ಸಹ ಮೈಸೂರಿನ ಬಂಡಿಪಾಳ್ಯದ ಪಕ್ಕಾ ಹಮಾಲಿಗಳ ನಗರದಲ್ಲಿ ವಾಸ ಮಾಡುವ ಮಹದೇವಪುರ  ಬಡಾವಣೆಯ ಮಧುವನ ನಗರದ ಕಡು ಬಡವರಿಗೆ   ಹಾಗೂ ಕೂಲಿ ಕಾರ್ಮಿಕರಿಗೆ  ಸುಮಾರು 1200ಜನರಿಗೆ   ಹಾಗೂ ಗಂಗೋತ್ರಿ ಯೂತ್ ಹಾಸ್ಟೆಲಿನ 100 ಜನರಿಗೆ,  ಪೊಲೀಸ್ ಸಿಬ್ಬಂದಿಗಳಿಗೆ 100 ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ 100 ಊಟ   ನೀರಿನ ಬಾಟಲ್  ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಳಗದ ಮುಖಂಡರಾದ ಎಲ್.ಆರ್.ಮಹದೇವಸ್ವಾಮಿ, ಬಿಜೆಪಿ ಮಹಿಳಾ ಮುಖಂಡರಾದ ,   ಲಕ್ಷ್ಮೀದೇವಿ, ಶ್ಯಾಮಲಾ ಬೇಕರಿ  ಮಾಲೀಕರಾದ ಆನಂದ್ , ಆರ್.ಕೆ ನಿಖಿಲ್ .ಜಸ್ವಂತ್ .ವಕೀಲರಾದ ಪ್ರಸನ್ನ . ಕೆ.ಎಸ್ ,ನಂದೀಶ್  , ಉಮೇಶ್ .ಹರೀಶ್. ಅಶೋಕ್  ಮುಂತಾದವರು  ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: