ಮೈಸೂರು

ಮಾ.18: ಕುಸ್ತಿ ಅಭಿಮಾನಿ ಬಳಗದ ವತಿಯಿಂದ ಕುಸ್ತಿ ಪಂದ್ಯಾವಳಿ

ಶ್ರೀಸ್ವಾಮಿ ವಿವೇಕಾನಂದರ 154 ನೇ ಜಯಂತ್ಯೋತ್ಸವದ ಅಂಗವಾಗಿ ಮೈಸೂರು ಕುಸ್ತಿ ಅಭಿಮಾನಿ ಬಳಗದ ವತಿಯಿಂದ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು  ಸಮಿತಿಯ ಸದಸ್ಯ ದೇವರಾಜು ತಿಳಿಸಿದರು.

ಮೈಸೂರಿನ  ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ್ 18 ರಂದು ಡಿ. ದೇವರಾಜ ಅರಸು ವಿವಿದೋದ್ಧೇಶ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ  ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಿ. ಧೃವಕುಮಾರ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದರು.

ಕುಸ್ತಿ ಪಂದ್ಯಾವಳಿಯಲ್ಲಿ 30 ಜೊತೆ ಕಾಟಾ ಕುಸ್ತಿ ಪಟುಗಳು ಭಾಗವಹಿಸಲಿದ್ದು, ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು. ಇದೇ ಸಂದರ್ಭ ನಿವೃತ್ತ ಪೊಲೀಸ್ ಅಧಿಕಾರಿ ಡಿ.ಎನ್.ಮುನಿಕೃಷ್ಣ,  ಮೈಸೂರು ವಿವಿಯ ವಿಶ್ರಾಂತಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಮೇಯರ್ ಎಂ.ಜೆ.ರವಿಕುಮಾರ್, ಸಂಚಾಲಕರಾದ ಪೈ.ಅಸ್ಲಂ ಖಾಜಿ ,ಮಾಜಿ ನಗರ ಸಭೆ ಅಧ್ಯಕ್ಷ ಜಿ.ವೀರಣ್ಣ ಇವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭ  ಕುಸ್ತಿ ಪಂದ್ಯಾವಳಿಯ ಪೋಸ್ಟರ್ ನ್ನು ಬಿಡುಗಡೆಗೊಳಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ರವಿಕುಮಾರ, ಅಮೃತ್, ಕೆಂಪಣ್ಣ ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: