ಮೈಸೂರು

ಕೊರೋನಾ ಎಫೆಕ್ಟ್ : ನಗರದಲ್ಲಿ ಅಪರಾಧ ಪ್ರಕರಣಗಳಲ್ಲಿ ಇಳಿಕೆ

ಮೈಸೂರು,ಏ.16:- ಕೊರೋನಾ ನಿಯಂತ್ರಣಕ್ಕಾಗಿ ಮೈಸೂರು ಪೊಲೀಸರು ಕೈಗೊಂಡಿರುವ ಕಟ್ಟೆಚ್ಚರದಿಂದ ನಗರದಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದೆ.

ಕಳ್ಳರಿಗೂ ಕೊರೋನಾ ಭೀತಿ ಕಾಡ ತೊಡಗಿದಂತಾಗಿದೆ. ಕಳೆದ ಮೂರು ತಿಂಗಳಲ್ಲಿ ಅಪರಾಧದ ಅಂಕಿ ಅಂಶ ಇಳಿಮುಖಗೊಂಡಿದ್ದು  ಮಾರ್ಚ್, ಏಪ್ರೀಲ್ ತಿಂಗಳ ಈವರೆಗೆ ಒಂದೆರಡು ಹಲ್ಲೆ ಪ್ರಕರಣ ನಡೆದಿರುವುದು ಬಿಟ್ಟರೆ ಬೇರೆ ಯಾವುದೇ ಪ್ರಕರಣ ದಾಖಲಾಗಿಲ್ಲ. ನಗರದ ಪೊಲೀಸ್ ಇಲಾಖೆಯ ಅಂಕಿ-ಅಂಶದ ವೆಬ್ ಸೈಟ್ ಕೂಡ ಅಪರಾಧಗಳ ವರ್ಗೀಕರಣ ಕಾಲಂನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ನಮೂದಿಸಲಾಗಿದೆ.

ಜನವರಿಯಲ್ಲಿ ನಾಲ್ಕು ದರೋಡೆ, 8ಮನೆಗಳ್ಳತನ, 12 ನಿರ್ಲಕ್ಷ್ಯದಿಂದ ಸಾವು, 2ವರದಕ್ಷಿಣೆ ಸಾವು, 2ಸಾಮಾನ್ಯ ಕಳ್ಳತನ ಸೇರಿದಂತೆ 256ಪ್ರಕರಣ ದಾಖಲುಗೊಂಡಿತ್ತು. ಮಾರ್ಚ್ ತಿಂಗಳಲ್ಲಿ ಯಾವುದೇ ಗಂಭೀರ ಪ್ರಕರಣ ದಾಖಲಾಗಿಲ್ಲ. ಏ.15ರವರೆಗೂ ಹಲ್ಲೆ, ದೂರು, ಪ್ರತಿದೂರಿನಂತಹ ಪ್ರಕರಣಗಳಷ್ಟೇ ದಾಖಲಾಗಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: