ಮೈಸೂರು

ಲಾಕ್ ಡೌನ್ ವಿಸ್ತರಣೆ ಹಿನ್ನೆಲೆ : ಮಂಗಳಮುಖಿಯರಿಗೆ ಶಾಸಕ ರಾಮದಾಸ್ ದಿನಸಿ ಕಿಟ್ ವಿತರಣೆ

ಮೈಸೂರು,ಏ.16:- ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್ ಡೌನ್ ಮೇ.3ರವರೆಗೆ ವಿಸ್ತರಣೆಯಾಗಿದ್ದು, ಮಂಗಳಮುಖಿಯರಿಗೆ ಇಂದು ಶಾಸಕ ಎಸ್.ಎ. ರಾಮದಾಸ್ ದಿನಸಿ ಕಿಟ್ ವಿತರಿಸಿದರು.

ರೋಟರಿ ಸಂಸ್ಥೆಯ ಸಹಯೋಗದೊಂದಿಗೆ  ಮೈಸೂರಿನ ಬಲ್ಲಾಳ ವೃತ್ತದ ಬಳಿಯ ಆಶೋದಯ ಸಂಸ್ಥೆ ಯಲ್ಲಿನ ಮಂಗಳಮುಖಿಯರಿಗೆ ಶಾಸಕರು ದಿನಸಿ ಕಿಟ್ ವಿತರಿಸಿದರು. ಆಶೋದಯ ಸಂಸ್ಥೆಯಲ್ಲಿರುವ ಮಂಗಳಮುಖಿಯರು, ಹೆಚ್ ಐ ವಿ ಪೀಡಿತರು, ನಿರಾಶ್ರಿತರ  ಸುಮಾರು 200ಕ್ಕೂ  ಹೆಚ್ಚು ಜನರಿಗೆ ಕಿಟ್ ವಿತರಿಸಿದರು. ಎರಡನೇ ಹಂತದ ಲಾಕ್ ಡೌನ್ ಹಿನ್ನಲೆಯಲ್ಲಿ ಮುಂದಿನ 20 ದಿನಗಳವರೆಗೆ ಬೇಕಾಗುವ ದಿನಸಿ ವಿತರಿಸಿದರು.

ಶಾಸಕರಿಗೆ  ರೋಟರಿ ಸಂಸ್ಥೆ ಪದಾಧಿಕಾರಿಗಳು ಹಾಗೂ ಮುಖಂಡರು ಸಾಥ್ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: