ಮೈಸೂರು

ಆರ್ಟ್ ಆಫ್ ಲೀವಿಂಗ್ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ  ಪೌರಕಾರ್ಮಿಕರಿಗೆ ಹಣ್ಣು ವಿತರಣೆ

ಮೈಸೂರು,ಏ.16:- ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ಶಾರದಾದೇವಿ ನಗರದ ವೃತ್ತದಿಂದ  ಪ್ರಾರಂಭಗೊಂಡು  ಸುತ್ತಮುತ್ತ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ     ಪೌರಕಾರ್ಮಿಕರಿಗೆ ಹಣ್ಣು ವಿತರಣೆ ಮಾಡಲಾಯಿತು.

ಕೊರೋನಾ ಸಂಕಷ್ಟದಲ್ಲಿ ಪೌರಕಾರ್ಮಿಕರ ಕೆಲಸ ಬಹಳ ದೊಡ್ಡದು. ಅದರಲ್ಲಿಯೂ ‍ಕ್ವಾರೆಂಟೈನ್ ನಲ್ಲಿರುವವರ ಮನೆ ಗಳಲ್ಲಿಯೂ ವಿಶೇಷ ಕಾಳಜಿ ವಹಿಸಿ ತ್ಯಾಜ್ಯ ಸಂಗ್ರಹಿಸುತ್ತಿರುವುದು, ಜೊತೆಗೆ ದೇಶವೇ ಲಾಕ್ ಡೌನ್ ಆಗಿದ್ದರೂ ಮನೆ-ಮನೆಗಳಲ್ಲಿನ ತ್ಯಾಜ್ಯವನ್ನು ಸಂಗ್ರಹಿಸುತ್ತಾ ಇರುವುದರಿಂದ ಜನರ ಆರೋಗ್ಯ ಚೆನ್ನಾಗಿದೆ,  ಪೌರಕಾರ್ಮಿಕರು ಲಾಕ್ ಡೌನ್ ಮಾಡಿದ್ದರೆ ರಸ್ತೆ-ರಸ್ತೆಗಳು ಗಬ್ಬು ನಾರುತ್ತಿದ್ದವು. ಈ ಕಾರಣದಿಂದ ದೇಶದ ಪ್ರಧಾನಮಂತ್ರಿಗಳಿಂದಲೂ ಅವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಯಿತು.

ಹಲವಾರು ಸಂಘ-ಸಂಸ್ಥೆಗಳು ಅಲ್ಲಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ, ಕಾಫಿ-ಟೀ ವ್ಯವಸ್ಥೆ, ದಿನಸಿ ವಿತರಣೆ ಮಾಡಿವೆ. ಇಂದು ಆರ್ಟ್ ಆಫ್ ಲೀವಿಂಗ್ ಹಾಗೂ ಅಪೂರ್ವ ಸ್ನೇಹ ಬಳಗ  ಮೈಸೂರು ಘಟಕದಿಂದ ನಗರದ 10 ವಾರ್ಡುಗಳ ಪೌರಕಾರ್ಮಿಕರಿಗೆ ರೋಗನಿರೋಧಕ ಶಕ್ತಿ ಹೆಚ್ಚಲು ಹಣ್ಣು ವಿತರಿಸಲಾಯಿತು. ಕೆಲಸದಲ್ಲಿದ್ದ ಪೌರಕಾರ್ಮಿಕರ ಮನೆಗೂ ಹಣ್ಣು ಕಳುಹಿಸಲಾಯಿತು. ನಂತರ ಮಾತನಾಡಿದ ಶ್ರೀ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ   ಪೌರಕಾರ್ಮಿಕರ ಜೊತೆ ಕೈಜೋಡಿಸೋಣ. ದುಡಿದು ತಿನ್ನಬೇಕೆಂಬ ಹಠವು ಪೌರಕಾರ್ಮಿಕರ ನಿಯತ್ತನ್ನು ತೋರಿಸುತ್ತದೆ. ಆದರೆ ಕೊರೋನಾ ವಿರುದ್ಧ ಸರ್ಕಾರ ಕೊಡುವ ಎಚ್ಚರಿಕೆಯನ್ನು ಪಾಪ ಅವರಾದರೂ ಎಷ್ಟೆಂದು ಪಾಲಿಸಲು ಸಾಧ್ಯ? ಹೀಗಾಗಿ, ನಮ್ಮ ಮನೆಯ ಕಸವನ್ನು ನಾವೇ ಪ್ರತ್ಯೇಕಿಸಿ ಕೊಡೋಣ. ನಾವು ಬಳಸಿದ ಕೈಗವಸು ಹಾಗೂ ಮಾಸ್ಕ್‌ಗಳನ್ನು ನಾವೇ ಬೆಂಕಿ ಹಚ್ಚಿ ಸುಟ್ಟು ಬಿಡೋಣ. ಇಂತಹ ಎಚ್ಚರಿಕೆ ಕ್ರಮಗಳ ಮೂಲಕ ವೈರಸ್‌ ತಡೆಗೆ ಅವರೊಂದಿಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭ  ಅಪೂರ್ವ ಸುರೇಶ್ , ತೀರ್ಥಕುಮಾರ್ ,ಹರೀಶ್ ,ಯುವ ಮುಖಂಡ ರಾಕೇಶ್ ಭಟ್, ವಿನಯ್ ಕಣಗಾಲ್ ,ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: