ಮೈಸೂರು

ಎನ್.ಮಂಜುನಾಥರಿಗೆ ಶ್ರದ್ಧಾಂಜಲಿ : ಅಗಲಿದ ಸ್ನೇಹಿತನ ನೆನೆದು ಭಾವುಕರಾದ ಗಣ್ಯರು

ಮೈಸೂರಿನ ಪರಭವನದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಅವರಿಗೆ ಶ್ರದ್ಧಾಂಜಲಿ ‌ಸಭೆಯನ್ನು ಆಯೋಜಿಸಲಾಗಿತ್ತು.

ಮೈಸೂರು ಗ್ರಾಮಾಂತರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಈ ಶ್ರದ್ಧಾಂಜಲಿ ಸಭೆಯಲ್ಲಿ, ಮೌನ ಆಚರಿಸುವ ಮೂಲಕ ದಿ.ಮಂಜುನಾಥ್ ಅವರ ಆತ್ಮಕ್ಕೆ ಶಾಂತಿ ಕೋರಿದರು. ಕಾಂಗ್ರೆಸ್ ಮುಖಂಡರು ಮಂಜುನಾಥ್ ‌ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇವೇಳೆ ಪಾಲಿಕೆ ಸದಸ್ಯ ಸೋಮಶೇಖರ್ ಮಾತನಾಡಿ, ಹುಬ್ಬಳ್ಳಿಯಲ್ಲಿ ದೊಡ್ಡ ಸಮಾವೇಶ ಮಾಡಿದ ಕೀರ್ತಿ ಮಂಜುನಾಥ್ ರಿಗೆ ಸಲ್ಲುತ್ತದೆ. ನಾನು ‌ನಗರ ಪಾಲಿಕೆ ಸದಸ್ಯನಾಗಲು ಕಾರಣಕರ್ತರೂ ಅವರೇ ಆಗಿದ್ದರು. ನಾನಿಂದು ಎಸ್.ಸಿ. ಘಟಕದ ಅಧ್ಯಕ್ಷನಾಗಿದ್ದೇನೆ. ನನಗೆ ಪಾಲಿಕೆ‌ ಚುನಾವಣೆಯಲ್ಲಿ ಟಿಕೆಟ್ ಕೊಡಿಸಿದವರೂ ಕೂಡ ಅವರೇ ಎಂದು ಹಳೆಯದೆಲ್ಲವನ್ನೂ ಸ್ಮರಿಸಿಕೊಂಡರು.

ವೆಂಕಟೇಶ್ ಮಾತನಾಡಿ, ಮಂಜುನಾಥ್ ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಆಸ್ಪತ್ರೆಗೆ ಸೇರಿದ ದಿನ ಪರಮೇಶ್ವರ್ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದೆ.  ಅಂದು ಹೃದಯದ ಖಾಯಿಲೆಗೆ ಸಂಬಂಧಿಸಿದಂತೆ ನರಳುತ್ತಿದ್ದರು. ಅಂದು ಜಯದೇವ ಆಸ್ಪತ್ರೆಯ ತಜ್ಞರ ಜೊತೆ ಮಾತುಕತೆ ನಡೆಸಿದ್ದೆವು. ಸಾಂತ್ವನ ಕೂಡ ಹೇಳಿದ್ದೆವು. ಮಂಜುನಾಥ್ ಅವರದು ಸಾಯುವ ವಯಸ್ಸಲ್ಲ. ಅವರ ನೆನಪು ಚಿರಕಾಲ‌ ಇರಲಿದೆ ಎಂದರು.

ಪುಷ್ಪಾ ಅಮರನಾಥ್ ಮಾತನಾಡಿ, ಇದು ಪಕ್ಷಕ್ಕೆ ಭರಿಸಲಾರದ ನಷ್ಟ. ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ನೀಡಲಿ ಎಂದರು. ಕಾಂಗ್ರೆಸ್ ಗಾಗಿ ತುಂಬಾ ಶ್ರಮಿಸಿದ್ದಾರೆ ಎಂದರು

ಸಂಸದ ಧ್ರುವನಾರಾಯಣ್, ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮುಖಂಡ ರವಿಶಂಕರ್  ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.  (ಎಸ್.ಎನ್.-ಎಸ್.ಎಚ್)

Leave a Reply

comments

Related Articles

error: