ಮೈಸೂರು

ಕೊರೋನಾ ಎಫೆಕ್ಟ್ ಹಿನ್ನೆಲೆ : ಸ್ವಯಂ ನಿರ್ಬಂಧ ಹೇರಿಕೊಂಡ ಉಪ್ಪಿನ ಕೇರಿ ನಿವಾಸಿಗಳು

ಮೈಸೂರು,ಏ.17:- ಕೊರೋನಾ ಎಫೆಕ್ಟ್ ಹಿನ್ನೆಲೆ ಮೈಸೂರಿನಲ್ಲಿ ಸಾರ್ವಜನಿಕರು ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ. ಮೈಸೂರಿನ ಉಪ್ಪಿನ ಕೇರಿ ನಿವಾಸಿಗಳು ಸ್ವಯಂ ದಿಗ್ಭಂಧನ ಹೇರಿಕೊಂಡಿದ್ದಾರೆ.

ತಮ್ಮ ಬಡವಾಣೆಗೆ ಹೊರಗಿನಿಂದ ಯಾರು ಬರದಂತೆ ಸ್ವಯಂ ನಿರ್ಬಂಧ ಹೇರಿದ್ದು, ಕೊರೋನಾ  ಸಮುದಾಯಕ್ಕೆ ಹರಡುವ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಈ  ನಿರ್ಬಂಧ ವಿಧಿಸಿಕೊಂಡಿದ್ದಾರೆ. ಬೇರೆ ಬಡಾವಣೆಯ ನಿವಾಸಿಗಳು ಹಾಗೂ ವಾಹನಗಳಿಗೂ ನಿರ್ಬಂಧ ಹೇರಿದ್ದು, ಸ್ಥಳೀಯ ನಿವಾಸಿಗಳು ಬಡಾವಣೆಯ ಮೂರು ರಸ್ತೆಗಳನ್ನು  ಬಂದ್ ಮಾಡಿದ್ದಾರೆ. ಬಡಾವಣೆಯನ್ನ  ಖುದ್ದು ತಾವೆ ಕ್ವಾರೈಂಟೆನ್ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಹಿನ್ನಲೆ  ಹಳ್ಳಿಗಳ ಪ್ರವೇಶ  ಮಾತ್ರ ನಿರ್ಬಂಧ ಮಾಡಲಾಗಿತ್ತು. ಆದರೆ ಈಗ ನಗರ ಪ್ರದೇಶದ ನಿವಾಸಿಗಳು ತಮ್ಮ ಬಡಾವಣೆಯನ್ನ ಸ್ವಯಂ ಪ್ರೇರಿತ ರಾಗಿ ಲಾಕ್ ಡೌನ್ ಮಾಡಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: