ಮೈಸೂರು

ರಸ್ತೆಯಲ್ಲಿ ಬಿದ್ದ ನೋಟುಗಳನ್ನು ನೋಡಿ ಬೆಚ್ಚಿ ಬಿದ್ದ ಜನತೆ

ಮೈಸೂರು, ಏ.17:- ನಗರದ ಹೆಬ್ಬಾಳದ 2ನೇ ಕ್ರಾಸ್​ ರಸ್ತೆಯಲ್ಲಿ 50 ರೂಪಾಯಿ ನೋಟುಗಳು ಬಿದ್ದಿದ್ದು, ಈ ನೋಟುಗಳನ್ನು ನೋಡಿದ ಜನರು ಆತಂಕಗೊಂಡಿದ್ದಾರೆ.

ಕೊರೋನಾ ವೈರಸ್ ಈಗಾಗಲೇ ಜನರನ್ನು ಬೆಚ್ಚಿ ಬೀಳಿಸಿದ್ದು , ಈ ನಡುವೆ ನಗರದ ಹೆಬ್ಬಾಳದ 2ನೇ ಕ್ರಾಸ್​ನ ಪ್ರಮುಖ ರಸ್ತೆಯಲ್ಲಿ 50 ರೂ ಮುಖಬೆಲೆಯ 7 ನೋಟುಗಳು ಪತ್ತೆಯಾಗಿವೆ. ನೋಟುಗಳನ್ನು ನೋಡಿ ಬೆಚ್ಚಿ ಬಿದ್ದಿರುವ ಜನರು ತಕ್ಷಣ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳಿಗೆ, ಸ್ಥಳೀಯ ಹೆಬ್ಬಾಳದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಜನರು ನೋಟುಗಳನ್ನು ಮುಟ್ಟದಂತೆ ತಡೆದಿದ್ದಾರೆ.  ಸ್ಥಳಕ್ಕೆ ಆರೋಗ್ಯ ಅಧಿಕಾರಿ ನಾಗರಾಜ್ ಆಗಮಿಸಿ ಈ‌ ನೋಟುಗಳಿಗೆ ಔಷಧಿಯನ್ನು ಸಿಂಪಡಿಸಿ ವಶಕ್ಕೆ ಪಡೆದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: