ಮೈಸೂರು

ಮಾ.19: ಊರುಗೋಲು ದಾರಿದೀಪ ಹಿರಿಯರೊಂದಿಗೆ ಸಹಚಿಂತನೆ

ರೋಟರಿ ಮೈಸೂರು ಉತ್ತರ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3181 ವತಿಯಿಂದ ಊರುಗೋಲು ದಾರಿದೀಪ ಹಿರಿಯರೊಂದಿಗೆ ಸಹಚಿಂತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿಯ ಅಧ್ಯಕ್ಷ  ಮಹಾದೇವಪ್ಪ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಮಾರ್ಚ್ 19 ರಂದು ಬೆಳಿಗ್ಗೆ 10ಕ್ಕೆ ನಗರದ ಸರಸ್ವತಿಪುರಂ ರೋಟರಿ ಪಶ್ಚಿಮ ಸಂಸ್ಥೆಯ ಸಭಾಂಗಣದಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ನಿತ್ಯಸ್ಥಾನಂದಜೀ ಮಹಾರಾಜ್ ಇವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಮಾಜಿ ಜಿಲ್ಲಾ ಗವರ್ನರ್  ಎಂ. ಲಕ್ಷ್ಮೀನಾರಾಯಣ್  ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅನುಭವ   ಅವಲೋಕನ ಕಾರ್ಯಕ್ರಮದಲ್ಲಿ ಗಣ್ಯರು ತಮ್ಮ ಬದುಕಿನ ಅನುಭವವನ್ನು ಹಂಚಿಕೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ಹಾಗೂ ಚಿಂತಕ ಪ್ರೊ. ಬಿ.ಕೆ. ಶೇಖ್ ಅಲಿ, ಹಿರಿಯ ನ್ಯಾಯಾವಾದಿ ಹೆಚ್. ಗಂಗಾಧರ್ ಮತ್ತು ಉದ್ಯಮಪತಿ ಬಿ.ಆರ್. ಪೈ.  ಇವರಿಗೆ ರೋಟರಿ ಹಿರಿಯ ನಾಗರಿಕ ಪ್ರಶಸ್ತಿ  ಪ್ರದಾನ ಮಾಡಲಾಗುವುದು ಎಂದು  ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಚಿನ್ನಸ್ವಾಮಿ, ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: