ಮೈಸೂರು

ಪಾರಂಪರಿಕ ಕಟ್ಟಡಗಳ ಕುರಿತು ಮಾಹಿತಿ ಸಂಗ್ರಹಿಸಿದ ಡಿ.ರಂದೀಪ್

ಮೈಸೂರು ಪಾರಂಪರಿಕ ನಗರಿಯಾಗಿದ್ದು, ಇಲ್ಲಿ ಹಲವಾರು ಪಾರಂಪರಿಕ ಕಟ್ಟಡಗಳಿವೆ. ಇವುಗಳನ್ನು ಯಾವ ರೀತಿ ಉಳಿಸಿಕೊಂಡು ಹೋಗಬಹುದು ಎನ್ನುವ ಕುರಿತಂತೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಡಿ.ರಂದೀಪ್ ಪಾರಂಪರಿಕ ಕಟ್ಟಡಗಳಾದ ದೇವರಾಜ್ ಮಾರುಕಟ್ಟೆ ಕುಸಿತಗೊಂಡ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಉಳಿದ ಪಾರಂಪರಿಕ ಕಟ್ಟಡಗಳನ್ನು ಯಾವ ರೀತಿ ಸರಕ್ಷಿಸಿಕೊಂಡು ಹೋಗಬಹುದು ಎನ್ನುವುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಪಾರಂಪರಿಕ ಕಟ್ಟಡಗಳ ನಕ್ಷೆ ತರಿಸಿ ದುರಸ್ತಿಯಿದ್ದಲ್ಲಿ ಯಾವರೀತಿ ಮಾಡಬೇಕು, ನಕ್ಷೆಯ ಪ್ರಕಾರವೇ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬಹುದು, ಕಟ್ಟಡಗಳು ಸುಸ್ಥಿತಿಯಲ್ಲಿರಬಹುದೋ ಇಲ್ಲವೋ ಎಂಬಿತ್ಯಾದಿ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕಿದರು. ಮುಂಜಾಗ್ರತಾ ಕ್ರಮವಾಗಿ ಸಭೆಯನ್ನು ನಡೆಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

ಸಭೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ  ಮಹೇಶ್ ,ಮತ್ತು ಪಾರಂಪರಿಕ ಇಲಾಖೆಗೆ ಸೇರಿದ ಅಧಿಕಾರಿಗಳು ಉಪಸ್ಥಿತರಿದ್ದರು.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: