ಮೈಸೂರು

ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ತೆಗೆದುಕೊಳ್ಳುತ್ತಿರುವ  ಕ್ರಮಗಳಿಗೆ ಬೆಂಬಲ ಸೂಚಿಸಬೇಕು : ಸೈಕಲ್ ಪ್ಯೂರ್‍ಅಗರಬತ್ತೀಸ್ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‍ರಂಗ

ಮೈಸೂರು,ಏ.18:- “ಕೊವಿಡ್-19 ಹರಡುವಿಕೆಯನ್ನು ತಡೆಯಲು  ಸರ್ಕಾರ ಅತ್ಯುತ್ತಮ ರೀತಿಯಲ್ಲಿ ಎಲ್ಲಾ  ಕ್ರಮಗಳನ್ನು ಕೈಗೊಳ್ಳುತ್ತಿದೆ. ದೀರ್ಘಾವಧಿಯಲ್ಲಿ ಇದು ಒಟ್ಟಾರೆ ದೇಶದ ಆರೋಗ್ಯದ  ಮೇಲೆ ಪರಿಣಾಮ ಬೀರಲಿದೆ. ಈ ಮಾರಕ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಸಕಾಲದಲ್ಲಿ ಮಧ್ಯಪ್ರವೇಶ ಮಾಡಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ತೆಗೆದುಕೊಳ್ಳುತ್ತಿರುವ  ಕ್ರಮಗಳಿಗೆ ಬೆಂಬಲ ಸೂಚಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಆಡಳಿತದೊಂದಿಗೆ ಕೈಜೋಡಿಸಿದ್ದೇವೆ. ವ್ಯವಹಾರಗಳೆಲ್ಲವುಗಳ ಮೇಲೆ ಈ ಕೊರೊನಾವೈರಸ್‍ನ ಪರಿಣಾಮ ಬೀರಿದೆ, ಆದಾಗ್ಯೂ, ಸರ್ಕಾರ ತೆಗೆದುಕೊಳ್ಳುತ್ತಿರುವ ಉಪಕ್ರಮಗಳಿಗೆ ಬೆಂಬಲದಅಗತ್ಯವಿದೆ ಎಂದು ಸೈಕಲ್ ಪ್ಯೂರ್‍ಅಗರಬತ್ತೀಸ್ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್‍ರಂಗ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ನಮ್ಮ ಸಂಸ್ಥೆ ತನ್ನ ಎಲ್ಲ ಉದ್ಯೋಗಿಗಳಿಗೆ ಅವರ ಆರೋಗ್ಯದ ಹಿತದೃಷ್ಟಿಯಿಂದ ಮನೆಯಿಂದ ಕೆಲಸ ನೀಡಿದೆ ಮತ್ತು ಮನೆಯಲ್ಲಿಯೇ ಇದ್ದು ಸರಿಯಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ ಎಂದರು. ನಾವು ನಮ್ಮ ಉದ್ಯೋಗಿಗಳಿಗೆ ಉದ್ಯೋಗ ಭದ್ರತೆ ಮತ್ತು ಸಮಯೋಚಿತ ವೇತನದ ಬಗ್ಗೆ ಭರವಸೆ ನೀಡಿದ್ದೇವೆ. ಮಾರ್ಚ ತಿಂಗಳಿಗೆ ನಮ್ಮ ಎಲ್ಲ ಉದ್ಯೋಗಿಗಳು ಮತ್ತು ಸಹವರ್ತಿಗಳಿಗೆ ಮುಂಚಿತವಾಗಿ ನಾವು ಸಂಬಳವನ್ನು ಪಾವತಿಸಿದ್ದೇವೆ ಮತ್ತು ಏಪ್ರಿಲ್ ನಲ್ಲೂ ಅದೇ ರೀತಿ ಮಾಡಲು ನಾವು ಉದ್ದೇಶಿಸಿದ್ದೇವೆ’’ಎಂದು ಹೇಳಿದ್ದಾರೆ.

“ದೀರ್ಘಾವಧಿಯಲ್ಲಿ ನಾವು ಹೆಚ್ಚು ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುವುದನ್ನು ತಡೆಗಟ್ಟುವುದನ್ನು ಖಾತರಿಪಡಿಸಲು ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಅಳವಡಿಕೆ ಮಾಡುತ್ತಿದೆ.  ಪ್ರಸ್ತುತ ಮಾರುಕಟ್ಟೆಯಲ್ಲಿ ಯಾವುದೇ ಸಕಾರಾತ್ಮಕ ಆವಿಷ್ಕಾರವಿಲ್ಲ, ಪ್ರಮಾಣಗಳು ಕಡಿಮೆ ಇವೆ. ಒಮ್ಮೆ ನಾವು ಈ ಪರಿಸ್ಥಿತಿಯಿಂದ ಹೊರ ಬಂದರೆ, ಮಾರುಕಟ್ಟೆ ತುಂಬಾ ನಿರಾಶದಾಯಕವಾಗಲಿದೆ ಎಂದು ನನಗನಿಸುತ್ತಿಲ್ಲ. ನಾವು ಇದರಿಂದ ಹೊರಬರುತ್ತೇವೆ ಮತ್ತು ಹಿಂದಿಗಿಂತಲೂ ಹೆಚ್ಚು ಶಕ್ತಿವಂತರಾಗಿ ಹೊರಹೊಮ್ಮಲಿದ್ದೇವೆ ಎಂಬ  ವಿಶ್ವಾಸ ನನಗಿದೆ ಎಂದಿದ್ದಾರೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: