ಮೈಸೂರು

ಅಕ್ಕಪಕ್ಕದ ಮನೆಗಳ ಗೋಡೆ ಕುಸಿತ

ಮೈಸೂರಿನ ಬನ್ನಿಮಂಟಪ ಬಳಿ ಇರುವ ಅಂಬೇಡ್ಕರ್ ಸಮುದಾಯ ಭವನದ ಪಕ್ಕ ಮೇದರ್ ಬ್ಲಾಕ್ ನಲ್ಲಿ ಎರಡು ಮನೆಗಳ ಗೋಡೆ ಕುಸಿದು ಬಿದ್ದಿದೆ.

ಮೇದರ್ ಬ್ಲಾಕ್ ಬಳಿ ಇರುವ ಅಕ್ಕಪಕ್ಕದ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಒಂದು ಮನೆಯ ಗೋಡೆ ಕುಸಿದು ಬೀಳುತ್ತಿದ್ದಂತೆ ಆ ಮನೆಯವರು ಜೋರಾಗಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಪಕ್ಕದ ಮನೆಯವರು ಹೊರಗೆ ಓಡಿ ಬಂದಿದ್ದು, ಅಲ್ಲಿಯೂ ಗೋಡೆ ಕುಸಿದು ಬಿದ್ದಿದೆ. ಎಲ್ಲರೂ ಹೊರಗೆ ಓಡಿ ಬಂದ ಪರಿಣಾಮ ಪ್ರಾಣಾಪಾಯಗಳು ಸಂಭವಿಸಿಲ್ಲ. ತಕ್ಷಣ ಅಕ್ಕಪಕ್ಕದವರು ಮಹಾನಗರಪಾಲಿಕೆಗೆ ವಿಷಯ ರವಾನಿಸಿದ್ದು, ಅಗ್ನಿಶಾಂಕ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿದ ಪಾಲಿಕೆ ಅಧಿಕಾರಿಗಳು ಅವಶೇಷಗಳ  ತೆರವು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: