ಮೈಸೂರು

ಉಮೇದುವಾರಿಕೆ ಸಲ್ಲಿಸಿದ ಪಕ್ಷೇತರರು

ನಂಜನಗೂಡು ಉಪ‌‌ಚುನಾವಣೆ ಹಿನ್ನಲೆಯಲ್ಲಿ ಮಾ. 14ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ  ಮೂರು ದಿನವಾದರೂ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ.  ಶುಕ್ರವಾರ ಮೂವರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರದೀಪ್ ಕುಮಾರ್, ದೇವರಸನಹಳ್ಳಿಯ ಮಲ್ಲಣ್ಣ ದೇವರಸನಹಳ್ಳಿ ಹಾಗೂ ನಂಜನಗೂಡಿನ ಅಶೋಕಪುರಂ ನಿವಾಸಿ ಸುಬ್ಬಯ್ಯ ಸೇರಿದಂತೆ ಮೂವರು ಚುನಾವಣಾ ಅಧಿಕಾರಿ ಜೆ.ಜಗದೀಶ್ ಅವರಿಗೆ ತಮ್ಮ- ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿರುವ ಉಪ ಚುನಾವಣೆಯಲ್ಲಿ ಪಕ್ಷೇತರರು ಕೂಡ ಒಂದು ಕೈ ನೋಡಲು ಪಣ ತೊಟ್ಟಿರುವಂತಿದೆ. ಆದರೆ ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿನ ಅಖಾಡ ಎಂದೇ ಬಿಂಬಿತವಾಗಿರುವ ನಂಜನಗೂಡು ಕ್ಷೇತ್ರ ಯಾರಿಗೆ ಒಲಿಯಲಿದೆ ಎಂಬುದು ಫಲಿತಾಂಶವೇ ತಿಳಿಸಲಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: