ಮೈಸೂರು

ತಮ್ಮ ವಾರ್ಡ್ ನಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ದಿನಸಿ ವಿತರಿಸಿದ ಪಾಲಿಕೆ ಸದಸ್ಯ ಗೋಪಿ

ಮೈಸೂರು. ಏ.20:- ಮೈಸೂರು ಮಹಾನಗರಪಾಲಿಕೆಯ ಸದಸ್ಯರಾದ  ಗೋಪಿ ಅವರಿಂದು ತಮ್ಮ ವಾರ್ಡ್ ನಲ್ಲಿ ಇಂದು ಸಾವಿರಕ್ಕೂ ಹೆಚ್ಚು ಮಂದಿಗೆ  ಹದಿನೈದು ದಿನಕ್ಕಾಗುವಷ್ಟು ದಿನಸಿ ವಿತರಿಸಿದರು.

ಟಿಕೆ, ಲೇ ಔಟ್, ಜನತಾ ನಗರದಲ್ಲಿ ದಿನಸಿ ವಿತರಿಸಿ ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಘೋಷಿಸಲಾಗಿದ್ದು ಕಡು ಬಡವರಿಗೆ, ನಿರಾಶ್ರಿತರಿಗೆ ಇದರಿಂದ ತೊಂದರೆಯಾಗುತ್ತಿದೆ. ಅದಕ್ಕಾಗಿ ಯಾರೂ ಹಸಿವಿನಿಂದ ಬಳಲಬಾರದೆಂದು ಇಂದು ನಮ್ಮ ವಾರ್ಡ್ ನಲ್ಲಿ  ಹದಿನೈದು ದಿನಕ್ಕಾಗುವಷ್ಟು ದಿನಸಿ ವಿತರಣೆ ಮಾಡುತ್ತಿದ್ದೇನೆ ಎಂದರು.

ಡಿಸಿಪಿ ಡಾ.ಎನ್ ಪ್ರ ಕಾಶ್ ಗೌಡ ಮಾತನಾಡಿ ಮನೆಯಿಂದ ಯಾರೂ ಹೊರಗೆ ಬರಬೇಡಿ. ಕೊರೋನ ವೈರಸ್ ಹರಡದಂತೆ  ತಡೆಯಲು ಸಹಕರಿಸಿ. ನೀವು ಮನೆಯಿಂದ ಹೊರಬರಬಾರದು, ಸುರಕ್ಷಿತವಾಗಿರಬೇಕೆಂಬ ದೃಷ್ಟಿಯಿಂದಲೇ ಗೋಪಿಯವರು ದಿನಸಿ ವಿತರಿಸುತ್ತಿದ್ದಾರೆ. ದಯವಿಟ್ಟು   ಯಾರೂ ಮನೆಯಿಂದ ಹೊರಗೆ ಬರಬೇಡಿ. ನಿಮ್ಮ ಆರೋಗ್ಯದ ಜೊತೆ ಸಮಾಜದ ಸ್ವಾಸ್ತ್ಥ್ಯ ಕಾಪಾಡಿ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: