ಕರ್ನಾಟಕ

ಸಂಕಷ್ಟದಲ್ಲಿ ಉಚಿತ ಆಹಾರ ವಿತರಣೆ ಶ್ಲಾಘನೀಯ ಕಾರ್ಯ: ಮಂಡ್ಯ ಡಿ.ಸಿ

ಮಂಡ್ಯ (ಏ.20): ಸಂಕಷ್ಟದ ರೈತರಿಂದ ನೇರವಾಗಿ ಟಮೋಟೋ, ಹೂಕೋಸು, ಮೆಣಸಿನಕಾಯಿ, ಬೀನ್ಸು, ಬೀಟ್ರೋಟ್ ಮುಂತಾದ ತರಕಾರಿಗಳನ್ನು ಖರೀದಿಮಾಡಿ, ಸ್ವರ್ಣಸ್ರಂದ್ರ ಮತ್ತು ಮಳವಳ್ಳಿಯಲ್ಲಿ ಇರುವಂತಹ ಕಾಂಟೈನ್‍ಮೆಂಟ್ ಪ್ರದೇಶದಲ್ಲಿ ತೊಂದರೆಗೆ ಒಳಗಾದ ಕುಟುಂಬಗಳಿಗೆ ಜಿಲ್ಲಾಡಳಿತ, ಕೃಷಿ ಇಲಾಖೆ, ಜಂಟಿ ನಿರ್ದೇಶಕರನ್ನು ಒಳಗೊಂಡ ತಂಡ ಸಹಾಯ ಹಸ್ತ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾದ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.

ಮಂಡ್ಯ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಶನಿವಾರ ನಡೆದ ಉಚಿತ ಆಹಾರ ವಿತರಣ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಅಧಿಕಾರಿಗಳೆಲ್ಲ ಒಟ್ಟುಗೂಡಿ ಅಂದಾಜು ಸುಮಾರು 50 ಸಾವಿರ ರೂ.ಗಳನ್ನು ಕೃಢೀಕರಣ ಮಾಡಿಕೊಂಡು ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ಉಚಿತ ಹಣ್ಣು-ತರಕಾರಿಗಳನ್ನು ವಿತರಿಸುತ್ತಿರುವುದು ಇತರರಿಗು ಸಹ ಮಾದರಿಯಾಗಿದೆ ಎಂದರು.

ಜಿಲ್ಲಾದ್ಯಂತ ಇರುವ ಸ್ವಯಂಸಂಸ್ಥೆಗಳು, ಅಧಿಕಾರಿಗಳು, ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕರು ಕೂಡ ಕಷ್ಟದಲ್ಲಿರುವವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಇದೊಂದು ಅನುಕರಣವಾದಂತ ವಿಷಯವಾಗಿದ್ದು, ಇದೇ ರೀತಿ ಸಮಸ್ಯೆಯಲ್ಲಿ ಇರುವವರಿಗೆ ಪ್ರತಿಯೊಬ್ಬರು ತಮ್ಮ ಹಂತದಲ್ಲಿ ಆಗುವಷ್ಟು ಸಹಾಯವನ್ನು ಮಾಡಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಇಲ್ಲಿಯವರೆಗು ಕೂಡ ಮುಖ್ಯಮಂತ್ರಿ ಪರಿಹಾರ ನಿಧಿ, ಪ್ರಧಾನ ಮಂತ್ರಿ ಪರಿಹಾರ ನಿಧಿ, ಮತ್ತು ಜಿಲ್ಲಾಧಿಕಾರಿಗಳ ಪರಿಹಾರ ನಿಧಿಗೆ ಅಂದಾಜು ಸುಮಾರು 40 ಲಕ್ಷ ದೇಣಿಗೆ ಸಂಗ್ರಹವಾಗಿದೆ. ಇದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಇಲ್ಲಿ ಸ್ಥಳೀಯವಾಗಿ ಬಂದಂತಹ ಹಣವನ್ನು ನಮ್ಮ ವೈದ್ಯಕೀಯ ಇಲಾಖೆಯ ಸಾಮಾಗ್ರಿಗಳನ್ನು ಖರೀದಿ ಮಾಡಲು ಮತ್ತು ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ಇದನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಇನ್ನು ಹೆಚ್ಚಿನ ರೀತಿಯಲ್ಲಿ ಸಂಘ-ಸಂಸ್ಥೆಯವರು ಮತ್ತು ಕೈಗಾರಿಕ ಉದ್ಯಮಿಗಳು ಸಮಸ್ಯೆಯಲ್ಲಿ ಇರುವವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.

ಕಾರ್ಯಾಕ್ರಮದಲ್ಲಿ ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಯಾಲಕ್ಕಿಗೌಡ, ಜಂಟಿ ಕೃಷಿ ಇಲಾಖೆಯ ಅಧಿಕಾರಿಗಳಾದ ಚಂದ್ರಶೇಖರ್ ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷರಾದ ಮೀರಾಶಿವಲಿಂಗಯ್ಯ ಮತ್ತು ಇತರರು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: