ಮೈಸೂರು

ಉತ್ತಮ ರೀತಿಯ ಕೃಷಿ ಸಂಶೋಧನೆಯಾಗಬೇಕು : ಡಾ.ಹೆಚ್.ಶಿವಣ್ಣ

ಉನ್ನತ ಮಟ್ಟದ ಅಭಿವೃದ್ದಿಗಾಗಿ ಉತ್ತಮ ರೀತಿಯ ಕೃಷಿ ಸಂಶೋಧನೆಯಾಗಬೇಕು ಎಂದು ಬೆಂಗಳೂರು ಕೃಷಿ ವಿವಿ ಯ ಕುಲಪತಿ ಡಾ.ಹೆಚ್. ಶಿವಣ್ಣ ತಿಳಿಸಿದರು.

ನಾಗನಹಳ್ಳಿಯಲ್ಲಿ ನಡೆದ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯ, ಕೃಷಿ ಸಂಶೋಧನಾ ಕೇಂದ್ರ ನಾಗನಹಳ್ಳಿಯ ಶತಮಾನೋತ್ಸವ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೃಷಿಯಲ್ಲಿ ಸಾಕಷ್ಟು ವರ್ಷಗಳಿಂದ ಬದಲಾವಣೆ ಆಗಿರಲಿಲ್ಲ. ಸುಮಾರು 60 ರಿಂದ 70ರ ದಶಕದಲ್ಲಿ ಕೃಷಿಯಲ್ಲಿ ಬದಲಾವಣೆಯಾಗುತ್ತಿದೆ.  ಈ ಬದಲಾವಣೆಯ ಆಧಾರದ ಮೇಲೆ ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ 700 ಮಿಲಿಯನ್ ಷ್ಟು ಆಹಾರ, 275 ಮಿಲಿಯನ್ ಷ್ಟು ತರಕಾರಿ, ಜೊತೆಗೆ 165 ರಿಂದ 170 ಮಿಲಿಯನ್ ಷ್ಟು ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ಈ ಅಭಿವೃದ್ಥಿಗೆ  ರೈತರು ಪ್ರಮುಕ ಕಾರಣಕರ್ತರಾಗಿದ್ದು,  ರೈತರಿಗೆ ಇದರ ಪ್ರತಿಫಲ ಸಿಗುವಂತಾಗಬೇಕು.ನಮ್ಮ  ದೇಶ ಮತ್ತಷ್ಟು  ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಕೃಷಿ ಆಯುಕ್ತ ಡಾ.ಜಿ.ಸತೀಶ್,  ಕೃಷಿ ವಿವಿಯ ಶಿಕ್ಷಣ ನಿರ್ದೇಶಕ ಡಾ.ಡಿ.ಪಿ. ಕುಮಾರ್,  ಸಂಶೋಧನಾ ನಿರ್ದೇಶಕ ಡಾ.ಎನ್.ಆರ್. ಗಂಗಾಧರಪ್ಪ, ಎನ್.ಶ್ರೀನಿವಾಸಯ್ಯ, ಹೆಚ್.ಎ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: