ಕರ್ನಾಟಕಪ್ರಮುಖ ಸುದ್ದಿ

ಕೆಎಸ್‍ಆರ್‍ಟಿಸಿ ಚಾಲಕ-ನಿರ್ವಾಹಕ ನೇಮಕಾತಿ: ಅವಧಿ ಮೇ 8ರ ವರೆಗೆ ವಿಸ್ತರಣೆ

ಬೆಂಗಳೂರು (ಏಪ್ರಿಲ್ 20): ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ದರ್ಜೆ-3ರ ಚಾಲಕ, ಚಾಲಕ-ಕಂ-ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 2020ರ ಫೆಬ್ರವರಿ 24 ರಿಂದ ಮಾರ್ಚ್ 20 ರವರೆಗೆ ಆಹ್ವಾನಿಸಲು ಪ್ರಕಟಣೆ ಹೊರಡಿಸಲಾಗಿತ್ತು.

ಆದರೆ, ಪ್ರಸ್ತುತ ಎಲ್ಲೆಡೆ ಕೋವಿದ್-19 ವೈರಾಣು ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅರ್ಜಿ ಸ್ವೀಕರಿಸಲು ಅಂತಿಮ ದಿನಾಂಕವನ್ನು ಏಪ್ರಿಲ್ 20 ರವರೆಗೆ ವಿಸ್ತರಿಸಲಾಗಿರುತ್ತದೆ.

ಮುಂದುವರೆದಂತೆ, ಕೋವಿದ್-19 ವೈರಾಣು ಹರಡುವುದನ್ನು ತಡೆಗಟ್ಟಲು ದಿನಾಂಕ ಮೇ 3ರ ವರೆಗೆ ದೇಶಾದ್ಯಂತ ಯಾರೂ ಮನೆಗಳಿಂದ ಓಡಾಡದಂತೆ ಲಾಕ್‍ಡೌನ್ ಮಾಡಿರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಅರ್ಜಿ ಸ್ವೀಕರಿಸಲು ಅಂತಿಮ ದಿನಾಂಕವನ್ನು ಮೇ 5 ರವರೆಗೆ ವಿಸ್ತರಿಸಿ ಅವಕಾಶ ನೀಡಲಾಗಿದೆ ಹಾಗೂ ಅರ್ಜಿ ಶುಲ್ಕ ಪಾವತಿಗೆ ಅಂತಿಮ ದಿನಾಂಕವನ್ನು ಮುಂಬರು ಮೇ 8ರ  ರವರೆಗೆ ವಿಸ್ತರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್-ಸೈಟ್ www.ksrtcjobs.karnataka.gov.in ನೋಡಬಹುದು. (ಎನ್.ಬಿ)

Leave a Reply

comments

Related Articles

error: