ಪ್ರಮುಖ ಸುದ್ದಿವಿದೇಶ

ಟಾಮ್ ಅಂಡ್ ಜೆರ್ರಿ ಕಾಮಿಡಿ ಸಿರೀಸ್ ನಿರ್ದೇಶಕ ಜೆನಿ ಡಿಚ್ ನಿಧನ

ಯುಎಸ್ಎ,ಏ.20- ಟಾಮ್ ಅಂಡ್ ಜೆರ್ರಿ ಕಾಮಿಡಿ ಸಿರೀಸ್ ನಿರ್ದೇಶಕ ಜೆನಿ ಡಿಚ್ (95) ನಿಧನರಾಗಿದ್ದಾರೆ.

ಇದೊಂದು ಆನಿಮಲ್ ಕಾರ್ಟೂನ್ ಸಿರೀಸ್. ಟಾಮ್ ಮತ್ತು ಜೆರ್ರಿ ಎಂಬ ಎರಡು ಪಾತ್ರಗಳನ್ನಿಟ್ಟುಕೊಂಡು ಹೆಣೆದ ಕಥೆಯಿದು. ಇದೊಂದು ಅಮೆರಿಕನ್ ಆನಿಮೇಟೆಡ್ ಕಾಮಿಡಿಯಿದು.

1946ರಲ್ಲಿ ಮೊದಲು ಇದು ರಿಲೀಸ್ ಆಗಿತ್ತು. 1940ರಿಂದ 1967ರವರೆಗೆ ಟಾಮ್ ಅಂಡ್ ಜೆರಿಯನ್ನು 8 ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ. 1961 ರಿಂದ 1962ರವರೆಗೆ 13 ಎಪಿಸೋಡ್ ನಿರ್ದೇಶನ ಮಾಡಿದ್ದರು. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರು ಕೂಡ ತುಂಬ ಖುಷಿ ಖುಷಿಯಿಂದ ನೋಡುತ್ತಿದ್ದರು.

ಚಿಕಾಗೋ ಮೂಲದ ಕಾರ್ಟೂನ್ ಆರ್ಟಿಸ್ಟ್, ಸಿನಿಮಾ ನಿರ್ದೆಶಕ, ಆನಿಮೇಶನ್ ನಿರ್ದೇಶಕ ಜೆನಿ ಡಿಚ್ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಮೂರು ಮಕ್ಕಳಿದ್ದಾರೆ. ಈ ಮೂರು ಮಕ್ಕಳು ಕೂಡ ಈಗ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. ಆನಿಮೇಶನ್‌ನಲ್ಲಿ ಡಿಚ್ ಆಸ್ಕರ್ ಪ್ರಶಸ್ತಿ ಪಡೆದಿದ್ದರು. (ಎಂ.ಎನ್)

Leave a Reply

comments

Related Articles

error: