ಮೈಸೂರು

ನೀರಿಲ್ಲದ ವೇಳೆ ವ್ಯರ್ಥ ಪೋಲಾಗುತ್ತಿದೆ ಸಾವಿರಾರು ಲೀಟರ್ ಗಟ್ಟಲೇ ನೀರು : ಉಡಾಫೆ ಉತ್ತರ ನೀಡುವ ನಗರಸಭೆ ಮುಖ್ಯಸ್ಥರು

ನಂಜನಗೂಡಿನ ನಗರಸಭೆ ಕಳೆದ ಎರಡು ವರ್ಷದಿಂದ ೨೪ ಗಂಟೆ ಕುಡಿಯುವ ನೀರಿನ ಸರಬರಾಜು ಮಾಡಲು ಕಾಮಗಾರಿಯನ್ನು ಮಾಡುತ್ತಿದೆ. ಆದರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗಾಗಲೇ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಇದರಿಂದ ಮೊದಲು ಬರುತ್ತಿದ್ದಷ್ಟು ನೀರು ಬರುತ್ತಿಲ್ಲ ಎಂದು ಸುತ್ತಮುತ್ತಲಿನ ಶ್ರೀರಾಮಪುರ ಹಾಗೂ ಆನಂದಪುರದ ಜನರು ನಗರಸಭೆ ಮುಂದೆ ಬಿಂದಿಗೆ ಹಿಡಿದು ಪ್ರತಿಭಟನೆಯನ್ನೂ ಮಾಡಿದ್ದರು. ಆದರೆ ಈಗ ಮತ್ತೆ ಇಲ್ಲಿನ ಕಾಳಪ್ಪ ಲೇಔಟ್ ಹಾಗೂ ಮಹದೇಶ್ವರ ಲೇಔಟ್ ನಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ. ಈಗಾಗಲೇ ನೀರಿನ ಪೈಪ್ ಗಳು ಒಡೆದು ಪ್ರಾಯೋಗಿಕವಾಗಿ ಹರಿಸಿದ ನೀರು ಬಡಾವಣೆಯ ರಸ್ತೆಯಲ್ಲಿ ವ್ಯರ್ಥವಾಗಿ ಹರಿಯುತ್ತಿದೆ.

ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದರೂ ಪ್ರಯೋಜನ ಇಲ್ಲ..!

ಬೇಸಿಗೆಯಲ್ಲಿ ಜನ ಹಾಗೂ ಜಾನುವಾರುಗಳುಕುಡಿಯುವನೀರಿಗೆ ಸಮಸ್ಯೆ ಇರುವ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಪೋಲಾಗುತ್ತಿದೆ. ಇದನ್ನು ಕಂಡ ಸ್ಥಳೀಯರು ನಗರ ಸಭೆ ಮುಖ್ಯಸ್ಥರಿಗೆ ಮಾಹಿತಿ ನೀಡಿದರೆ, ಅವರು ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರಂತೆ. ಅದು ನಮಗೆ ಸಂಬಂಧಿಸಿಲ್ಲ ಅದರ ಇಂಜಿನಿಯರ್ ಫೋನ್ ನಂಬರ್ ಕೊಡುತ್ತೇವೆ ಕೇಳಿ ಎಂದಿದ್ದಾರಂತೆ. ಇನ್ನೂ ಇಂಜಿನಿಯರ್ ಗೆ ಕರೆ ಮಾಡಿದರೆ, ಸ್ವಿಚ್ ಆಫ್ ಎಂಬ ಉತ್ತರ ಬರುತ್ತದೆ ಎಂದು ಬಡವಾಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚುನಾವಣೆ ಬೇರೆ ಶುರುವಾಗಿದೆ. ನೀರು ನಿಲ್ಲಿಸೋಕೆಚುನಾವಣೆ ಮುಗಿಯಬೇಕು ಅನಿಸುತ್ತದೆ. ಯಾಕೆಂದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಬ್ಬರು ಕೂಡ ಕೆಲಸ ಮಾಡಿದರೆ ಚುನಾವಣೆ ನೀತಿ ಸಂಹಿತೆ ಎಂಬ ಪಟ್ಟಿ ಅಂಟಿಸಲಾಗುತ್ತದೆ.

ಒಟ್ಟಾರೆ, ನೀರು ನಿಲ್ಲಿಸದಿದ್ದರೆಮುಂದೆಕುಡಿಯುವ ನೀರಿಗೆ ಪರದಾಡೋದಂತೂ ಸುಳ್ಳಲ್ಲ. ಆದರೆ, ಜಿಲ್ಲಾಧಿಕಾರಿಗಳೇ ಹೇಳಿರುವಂತೆ ನೀರು ಹಾಗೂ ಮೇವು, ಬರಕ್ಕೆ ಸಂಬಂಧಿಸಿದದಂತೆ ಯಾವ ವೇಳೆಯಾದರೂ ಕ್ರಮಕ್ಕೆಸಿದ್ದ ಎಂದಿರುವ ಮಾತು ಇಲ್ಲಿ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: