ದೇಶಪ್ರಮುಖ ಸುದ್ದಿ

ಮನೆ ಬಾಗಿಲಿಗೇ “ಮೊಬೈಲ್ ಪೆಟ್ರೋಲ್ ಟ್ಯಾಂಕ್”  ಲಾಕ್ ಡೌನ್ ವೇಳೆ ಹಿಟ್ ಆಯ್ತು ಟಾಟಾ ಕಂಪನಿಯ ಯೋಜನೆ

ಪುಣೆ (ಏ.20): ದೇಶದಲ್ಲಿ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಲಾಕ್‍ಡೌನ್ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಇದರಿಂದ ಜನರಿಗೆ ಅಗತ್ಯವಸ್ತುಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಇದೇ ರೀತಿ ಪೆಟ್ರೋಲ್ ಕೂಡ ನಮ್ಮ ದಿನಂಪ್ರತಿ ಅಗತ್ಯಗಳ ಪಟ್ಟಿಗೆ ಸೇರಿದೆ.

ಈ ಸಮಸ್ಯೆಗೆ ಪರಿಹಾರವೆನ್ನುವಂತೆ ರತನ್ ಟಾಟಾ ಅವರ ಸ್ಟಾರ್ಟ್ ಅಪ್ ಕಂಪನಿಯು ಈ ಸಮಯದಲ್ಲಿ ಮೊಬೈಲ್ ಪೆಟ್ರೋಲ್ ಸೇವೆ ಆರಂಭಿಸಿ ಲಾಭ ಪಡೆದಿದೆ.

ಟಾಟಾ ಕಂಪನಿಯು ಆ್ಯಪ್ ಆಧಾರಿತ “ಮೊಬೈಲ್ ಪೆಟ್ರೋಲ್ ಪಂಪ್” ಸೇವೆ ನೀಡುತ್ತದೆ. ಕಂಪನಿಯ ಹೋಮ್ ಡಿಲೆವರಿ ಮಾದರಿಯಿಂದಾಗಿ ಈ ಕಂಪನಿಯ ಬೇಡಿಕೆ ಹೆಚ್ಚಾಗಿದೆ.

ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಪುಣೆ ಮೂಲದ ರೆಪೊಸ್ ಎನರ್ಜಿ ಈಗ 300 ಕ್ಕೂ ಹೆಚ್ಚು ಮೊಬೈಲ್ ಪೆಟ್ರೋಲ್ ಪಂಪ್‌ಗಳನ್ನು ಹೊಂದಿದೆ. ಭಾರತದಾದ್ಯಂತ 90 ನಗರಗಳಲ್ಲಿ ಇದು ಸೇವೆ ನೀಡ್ತಿದೆ. ರೆಪೊಸ್ ಮೊಬೈಲ್ ಅಪ್ಲಿಕೇಶನ್ ಮತ್ತು ಸ್ಟಾರ್ಟ್ ಅಪ್ ಮೂಲಕ ಆರ್ಡರ್ ಮಾಡಬಹುದು. ಇದು ಹಲವಾರು ಪೆಟ್ರೋಲ್ ಪಂಪ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಪ್ರತಿದಿನ 500 ಲೀಟರ್‌ನಿಂದ 2,000 ಲೀಟರ್ ಪೆಟ್ರೋಲ್ ಆಸ್ಪತ್ರೆಗಳಿಗೆ ಹೋಗುತ್ತದೆ. ಪುಣೆಯಲ್ಲಿ ಒಂದು ಡಜನ್‌ಗೂ ಹೆಚ್ಚು ದೊಡ್ಡ ಆಸ್ಪತ್ರೆಗಳಿಗೆ ಪೆಟ್ರೋಲ್ ತಲುಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ. (ಎನ್.ಬಿ)

Leave a Reply

comments

Related Articles

error: