
ಮೈಸೂರು
ಕೊವಿಡ್-19 ವಿರುದ್ಧದ ಹೋರಾಟಕ್ಕೆಎನ್.ರಂಗಾರಾವ್ಅಂಡ್ ಸನ್ಸ್ ನಿಂದ ಹೀಲಿಂಗ್ ಟಚ್ ಸ್ಯಾನಿಟೈಸರ್ ಬಿಡುಗಡೆ
ಮೈಸೂರು, ಏ,20:- ದೇಶದ ಅತ್ಯಂತ ಜನಪ್ರಿಯ ಬ್ರಾಂಡ್ ಆಗಿರುವ ಸೈಕಲ್ ಪ್ಯೂರ್ ಅಗರಬತ್ತೀಸ್ನ ತಯಾರಕ ಸಂಸ್ಥೆಯಾಗಿರುವ ಎನ್.ರಂಗಾರಾವ್ಅಂಡ್ ಸನ್ಸ್ ಕೊರೋನಾ ವೈರಸ್ ಸಾಂಕ್ರಾಮಿಕದ ವಿರುದ್ಧ `ಹೀಲಿಂಗ್ಟಚ್’ ಎಂಬ ಹೆಸರಿನಲ್ಲಿ ಸ್ಯಾನಿಟೈಸರ್ ನ್ನು ಬಿಡುಗಡೆ ಮಾಡಿದೆ.
ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ಸ್ಯಾನಿಟೈಸರ್ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ವಿಟಮಿನ್ ಸಿ ಹೊಂದಿದ ಲೆಮನ್ ಆಧಾರಿತ ಸ್ಯಾನಿಟೈಸರ್ ಇದಾಗಿದ್ದು, ನಾಗರಿಕರಿಗೆ ನೈರ್ಮಲ್ಯ ಮತ್ತು ಸುರಕ್ಷತೆಯನ್ನುಒದಗಿಸುತ್ತದೆ.
ದೇಶಕ್ಕೆ ಸೇವೆ ಸಲ್ಲಿಸಲು ಬದ್ಧವಾಗಿದ್ದು, ಈಗಿನ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ಕಂಪನಿಯು ತನ್ನ ಸುಗಂಧಿತ ಮಾರ್ಗಗಳನ್ನು ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆಯತ್ತ ಗಮನಹರಿಸಿದೆ. ಆಯುಷ್ನ ಮಾರ್ಗದರ್ಶನದಡಿ ಸ್ಯಾನಿಟೈಸರ್ ಗುಣಮಟ್ಟ ಮತ್ತು ಲಭ್ಯತೆಗೆ ಒತ್ತು ನೀಡುತ್ತಿದೆ. ಮೊದಲ ಹಂತದಲ್ಲಿ 10,000 ಸ್ಯಾನಿಟೈಸರ್ಗಳನ್ನು ತಯಾರಿಸಲಾಗಿದ್ದು, ಅವುಗಳನ್ನು ಕೊರೋನಾ ವಿರುದ್ಧದ ಕರ್ತವ್ಯದಲ್ಲಿ ಭಾಗಿಯಾಗಿರುವ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗೆ ವಿತರಿಸಲೆಂದು ಮೈಸೂರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ.
ಪ್ರಸ್ತುತ, ಮೊದಲ ಹಂತದಲ್ಲಿ ಮೈಸೂರು ಮತ್ತುಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಮಾರಾಟ ಮತ್ತು ಪೂರೈಕೆ ಮಾಡಲುಯೋಜಿಸಲಾಗಿದೆ. ದೇಶಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಡರ್ ಮತ್ತು ಪೂರೈಕೆಗೆ ಆದ್ಯತೆ ನೀಡಲಾಗುತ್ತದೆ. ಆರಂಭಿಕ ಹಂತದಲ್ಲಿ 50 ಎಂಎಲ್ಜೆಲ್ ಸ್ಯಾನಿಟೈಸರ್ ನ್ನು ತಯಾರಿಸಲಾಗುತ್ತಿದೆ. ಇದಕ್ಕೆ ಆಯುಷ್ ಪ್ರಮಾಣೀಕರಿಸಿದ್ದು, ಸಗಟು ಆರ್ಡರ್ಗಳಿಗೆ ಲಭ್ಯವಿವೆ. ಈ ಸ್ಯಾನಿಟೈಸರ್ಗಳು 50 ಎಂಎಲ್, 100 ಎಂಎಲ್ ಮತ್ತು 250 ಎಂಎಲ್ಗಳ ಬಾಟಲಿಗಳಲ್ಲಿ ಲಭ್ಯವಿವೆ.
ಗ್ರಾಹಕರ ಜೀವನಶೈಲಿಯಲ್ಲಾಗಿರುವ ಬದಲಾವಣೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಹಿನ್ನೆಲೆಯಲ್ಲಿ ಇಂದು ಹ್ಯಾಂಡ್ ಸ್ಯಾನಿಟೈಸರ್ ಅತ್ಯಗತ್ಯ ವಸ್ತುವಾಗಿದೆ. ಇದೇವೇಳೆ, ಇನ್ಸ್ಟಂಟ್ಜೆರ್ಮ್ ಕ್ಲೀನರ್ಗೂ ಬೇಡಿಕೆ ಹೆಚ್ಚಾಗುತ್ತಿದೆ. ಇವುಗಳು ಜೆರ್ಮ್ಗಳನ್ನು ಹೊಡೆದೋಡಿಸಿ ಸುರಕ್ಷತೆ ಮತ್ತುರಕ್ಷಣೆಯನ್ನು ನೀಡಲು ನೆರವಾಗುತ್ತವೆ.
ಹೀಲಿಂಗ್ಟಚ್ ಶೇ.70 ರಷ್ಟುಆಲ್ಕೋಹಾಲ್ ಅನ್ನು ಹೊಂದಿದ್ದು, ಇದರಲ್ಲಿ ಆ್ಯಂಟಿಸೆಪ್ಟಿಕ್ ಅಂಶ, ವಿಟಮಿನ್ ಸಿ ಅಂಶಗಳಿವೆ. ಇದು ಜೆಲ್ ಮತ್ತು ಸ್ಪ್ರೇ ಹೀಗೆ ಎರಡು ವಿಧದಲ್ಲಿ ಲಭ್ಯವಿದೆ. 50 ಎಂಎಲ್ ಮತ್ತು 100 ಎಂಎಲ್ಗಾತ್ರದ ಬಾಟಲಿಗಳಲ್ಲಿ ಲಭ್ಯವಾಗಲಿದೆ. ಈ ಉತ್ಪನ್ನವನ್ನು ಖರೀದಿಸಲು ಮೊ.ಸಂ. 94481 66481 ಸಂಪರ್ಕಿಸಬಹುದು.
ಈ ಹೊಸ ಉತ್ಪನ್ನದ ಬಿಡುಗಡೆ ಬಗ್ಗೆ ಮಾತನಾಡಿದಎನ್. ರಂಗಾರಾವ್ಅಂಡ್ ಸನ್ಸ್ನ ವ್ಯವಸ್ಥಾಪಕ ಪಾಲುದಾರ ಕಿರಣ್ ರಂಗಾ ಅವರು, “ಕೊವಿಡ್-19 ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ಗೆ ಬೇಡಿಕೆ ಹೆಚ್ಚಾಗಲಿದೆ. ಎಫ್ಎಸ್ಎಸ್ಎಐನ ಬೆಂಬಲದೊಂದಿಗೆ ಈ ಹೀಲಿಂಗ್ಟಚ್ಉತ್ಪನ್ನವನ್ನು ಕೇವಲ 15 ದಿನಗಳಲ್ಲಿ ತಯಾರಿಸಲಾಗಿದೆ. ಈ ಮೂಲಕ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಉತ್ಪನ್ನವನ್ನು ಗರಿಷ್ಠ ಗ್ರಾಹಕರಿಗೆ ತಲುಪಿಸುವುದು ಮತ್ತು ಅವರಿಗೆ ಸುರಕ್ಷತೆ ನೀಡುವುದು ನಮ್ಮಉದ್ದೇಶವಾಗಿದೆ’’ಎಂದು ತಿಳಿಸಿದರು.
“ನೈರ್ಮಲ್ಯಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ನಮ್ಮ ಸ್ಯಾನಿಟೈಸರ್ಗಳು ಸುರಕ್ಷಿತ ಮತ್ತು ಇವುಗಳನ್ನು ನೈರ್ಮಲ್ಯ ಗುಣಮಟ್ಟದಡಿ ತಯಾರಿಸಲಾಗುತ್ತಿದೆ. ನಮ್ಮ ಈ ಹೊಸ ಉತ್ಪನ್ನವನ್ನು ಸಕಾಲದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ’’ಎಂದು ಹೇಳಿದರು.
ಈ ಸ್ಯಾನಿಟೈಸರ್ಗಳನ್ನು ತಯಾರಿಸುವಾಗ ವಿಶ್ವಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಅತ್ಯಂತ ಹೆಚ್ಚು ಗುಣಮಟ್ಟದ ಸ್ಯಾನಿಟೈಸರ್ಗಳು ಇವಾಗಿದ್ದು, ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದೆ. ಈ ಸ್ಯಾನಿಟೈಸರ್ಗಳು ಜನರನ್ನು ಜೆರ್ಮ್ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತವೆ.
ಜಾಗತಿಕ ಸಾಂಕ್ರಾಮಿಕ ವಿರುದ್ಧದ ಈ ಹೋರಾಟದಲ್ಲಿ ಕಂಪನಿ ಮೈಸೂರು ಮತ್ತು ಬೆಂಗಳೂರಿನ ಎನ್ಜಿಒಗಳೊಂದಿಗೆ ಕೆಲಸ ಮಾಡುತ್ತಿದೆ. ಈ ಮೂಲಕ ದಿನಗೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗೆಆಹಾರ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ. ಕಳೆದ 70 ವರ್ಷಗಳಿಂದ ಪ್ರಾರ್ಥನೆ ಮತ್ತು ಭಕ್ತಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಕಂಪನಿಯು ಮೈಸೂರಿಗೆ 20 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದರೆ, ಪಿಎಂ ಕೇರ್ಸ್ ನಿಧಿಗೆ 108,00,000 ರೂಪಾಯಿಗಳನ್ನು ನೀಡಿದೆ. (ಜಿ.ಕೆ, ಎಸ್.ಎಚ್)