ಮೈಸೂರು

ಡಿ.ವಿ.ಗುಂಡಪ್ಪನವರ ಪಾಠ, ಪ್ರವಚನ ಜೀವನದಲ್ಲಿ ಅಳವಡಿಸಿಕೊಳ್ಳಿ : ಬನ್ನೂರು ಕೆ.ರಾಜು

ಅರಿವು ಸಂಸ್ಥೆಯ ವತಿಯಿಂದ ದಳವಾಯಿ ಶಾಲೆ ಮಕ್ಕಳೊಂದಿಗೆ ಉಚಿತವಾಗಿ ಸರ್ವಜ್ಞ ರವರ ಪುಸ್ತಕ ವಿತರಣೆ ಮಾಡುವ ಮೂಲಕ  ದಾರ್ಶನಿಕ ಕವಿ ಡಿ.ವಿ.ಗುಂಡಪ್ಪನವರ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳಿಗೆ ಸರ್ವಜ್ಞನ ಪದಗಳು ಪುಸ್ತಕವನ್ನು ವಿತರಿಸಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ ಡಿ.ವಿ.ಗುಂಡಪ್ಪನವರ ಪಾಠ, ಪ್ರವಚನಗಳನ್ನು ಮನುಷ್ಯ ರೂಪಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ.ಇವರ ಜಯಂತಿಯನ್ನು ಅಕ್ಷರ ಜ್ಞಾನ ವನ್ನು ಜನರಿಗೆ ಕೊಡುವ ನಿಟ್ಡಿನಲ್ಲಿ ಸರ್ವಜ್ಞ ನ ಪದಗಳು ಎಂಬ ಪುಸ್ತಕ ಕೊಟ್ಡು ಅರ್ಥಪೂರ್ಣವಾಗಿ ದಳವಾಯಿ ಶಾಲೆಯಲ್ಲಿ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಬ್ರಾಹ್ಮಣ ಜಿಲ್ಲಾ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತಾನಾಡಿ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು ಎಂದು ತಿಳಿಸಿದರು.

ವೇದಿಕೆಯಲ್ಲಿ ದಳವಾಯಿ ಪ್ರಾಂಶುಪಾಲ ಮಂಜುನಾಥ್ ಯುವ ಮುಖಂಡ ಜೋಗಿಮಂಜು,ವಿಕ್ರಮ್ ಅಯ್ಯಂಗಾರ್,ದುರ್ಗಾ ಪ್ರಸಾದ್,ಅರಿವು ಸಂಸ್ಥೆ ಅಧ್ಯಕ್ಷ ಶ್ರಿಕಾಂತ್ ಕಶ್ಯಪ್ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: