ಮೈಸೂರು

ಕೊರೋನಾ ಸರ್ವೆಗೆ ತೆರಳಿದ ವೇಳೆ ಆಶಾಕಾರ್ಯರ್ತೆಗೆ ಪುಂಡರಿಂದ ಧಮ್ಕಿ : ಎನ್ ಆರ್ ಠಾಣೆಗೆ ದೂರು

ಮೈಸೂರು,ಏ.21:- ಕೊರೋನಾ ಜಾಗೃತಿ ಕುರಿತು ಮನೆಮನೆಗೆ  ಸರ್ವೆಗೆ ತೆರಳಿದ ವೇಳೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ ಆಶಾಕಾರ್ಯಕರ್ತೆಗೆ ಮೈಸೂರಿನಲ್ಲೂ   ದೌರ್ಜನ್ಯ ನಡೆದಿದ್ದು, ಎನ್ ಆರ್ ಠಾಣಾ ವ್ಯಾಪ್ತಿಯ ಆಲೀಂ ನಗರದಲ್ಲಿ ಆಶಾ ಕಾರ್ಯಕರ್ತೆಗೆ ಧಮ್ಕಿ ಹಾಕಲಾಗಿದೆ ಎನ್ನಲಾಗಿದೆ.

ಬನ್ನಿಮಂಟಪ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಸುಮಯಾ ಪಿರ್ದೋಸ್ ಎಂಬವರಿಗೆ ಬೆದರಿಕೆ ಹಾಕಲಾಗಿದ್ದು, ಕೊರೋನಾ ಲಕ್ಷಣಗಳ ಕುರಿತು ಸರ್ವೆ ಮಾಡುವ ವೇಳೆ ಮೂವರು ಪುಂಡರು ದೌರ್ಜನ್ಯ ನಡೆಸಿದ್ದಾರೆನ್ನಲಾಗಿದೆ. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದಿದ್ದಕ್ಕೆ ಮೆಹಬೂಬ್, ಖಲೀಲ್,ಜೀಸನ್ ಎಂಬ ಮೂವರು ಪುಂಡರು ಗಲಾಟೆ ಮಾಡಿದ್ದಾರೆನ್ನಲಾಗಿದೆ.  ಅವಾಚ್ಯ ಶಬ್ದಗಳಿಂದ ನಿಂದಿಸಿ ಆಶಾ ಕಾರ್ಯಕರ್ತೆ ಮೇಲೆ ಪುಂಡರು ಮುಗಿಬಿದ್ದಿದ್ದು, ಆಶಾ ಕಾರ್ಯಕರ್ತೆ ಎನ್ ಆರ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮೂವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದು, ಇನ್ನು ಉಳಿದವರನ್ನು ವಶಕ್ಕೆ ಪಡೆಯಬೇಕಿದೆ. ಬೆಂಗಳೂರಿನ ಸಾದಿಕ್ ನಗರದಲ್ಲಿಯೂ ಆಶಾ ಕಾರ್ಯಕರ್ತೆಯ ಮೇಲೆ   ಪುಂಡರು ಗುಂಪು ಹಲ್ಲೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: