ಪ್ರಮುಖ ಸುದ್ದಿ

ಅಪಘಾತದಲ್ಲಿ ಪಬ್ಲಿಕ್ ಟಿವಿ ರಾಮನಗರ ವರದಿಗಾರ ಹನುಮಂತು ಸಾವು 

ರಾಜ್ಯ(ರಾಮನಗರ)ಏ.21:- ರಾಮನಗರದ ಪಬ್ಲಿಕ್ ಟಿವಿ‌ ವರದಿಗಾರ ಹನುಮಂತು  ಅವರಿಗೆ ಹಿಂದಿನಿಂದ ಬಂದ ಎಟಿಎಂ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ರಾಮನಗರದ ಕಾರಾಗೃಹದ  ಬಳಿ ನಡೆದಿದೆ.

ಪಾದರಾಯನಪುರ ಗಲಭೆಯ ಆರೋಪಿಗಳನ್ನು ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ಸುದ್ದಿ ಮಾಡಿ ಬರುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಎಟಿಎಂ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.  ವಿವಾಹವಾಗಿ ಮೂರು ವರ್ಷವಾಗಿತ್ತು. ಒಂದು ವರ್ಷದ ಒಂದು ಮಗು ಹನುಮಂತು ಅವರಿಗಿದೆ. ಪಬ್ಲಿಕ್ ವರದಿಗಾರ ಹನುಮಂತು ಕಳೆದ 6 ವರ್ಷಗಳಿಂದಲೂ ರಾಮನಗರ ವದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಹನುಮಂತು ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತ ಸಹೋದ್ಯೋಗಿಗಳು ಕಂಬನಿ‌ ಮಿಡಿದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: