ಮೈಸೂರು

ಕೊರೋನಾ ವಿರುದ್ಧದ ಸಮರಕ್ಕೆ  ಕೈ ಜೋಡಿಸಿದ ಮೈಸೂರಿನ ಸಂಚಿತ್ ಸಜೀವ್ ಅಭಿಮಾನಿಗಳು : ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ

ಮೈಸೂರು,ಏ.21:- ಇಡೀ ರಾಜ್ಯದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿದ್ದು ತೀರ ಸಂಕಷ್ಟಕ್ಕೆ ಸಿಲುಕಿರುವುದು ಕೂಲಿ ಕಾರ್ಮಿಕರು , ದಿನಗೂಲಿ ನೌಕರರು , ಮತ್ತು ಬಡವರು, ಇವರಿಗೆ ಸಾಕಷ್ಟು ಸಂಘ ಸಂಸ್ಥೆಗಳು , ಜಿಲ್ಲಾಡಳಿತ , ಮಾನವೀಯ ಮೌಲ್ಯಯುಳ್ಳ ಸಮಾನ ಮನಸ್ಕ ಗೆಳೆಯರು ಸೇರಿ ನೆರವಿಗೆ ನಿಂತಿದ್ದಾರೆ.  ಅವರಿಗೆ ತಮ್ಮ ಕೈಲಾದ ಸಹಾಯ ಹಸ್ತ ಚಾಚಿದ್ದಾರೆ. ಅದರಂತೆ ಅಖಿಲ ಕರ್ನಾಟಕ ಸಂಚಿತ್ ಸಂಜೀವ್ ಅಭಿಮಾನಿ ಬಳಗವು ಸಹ ಎಲೆಮರೆ ಕಾಯಿಯಂತೆ ನೆರವಿಗೆ ನಿಂತಿದೆ.

ಖ್ಯಾತ ‌ನಟ ಕಿಚ್ಚ ಸುದೀಪ್ ಅವರ ಅಕ್ಕನ ಮಗನಾದ ಸಂಚಿತ್ ಸಂಜೀವ್ ಅವರು ಈ ರೀತಿಯ ಕೆಲಸಕಾರ್ಯಗಳಿಗೆ ಕೈ ಹಾಕಿದ್ದಾರೆ. ಅವರ ಆದೇಶದ ಮೇರೆಗೆ ರಾಜ್ಯದ ನಾನಾ ಕಡೆ ತಮ್ಮ ಅಭಿಮಾನಿಗಳು ನೆರವಿಗೆ ಧಾವಿಸಿದ್ದಾರೆ. ಕೊರೋನದ ಈ ಸಂಕಷ್ಟದ ಸಮಯದಲ್ಲಿ ಕೋವಿಡ್19- ಟಾಸ್ಕ್ ಫೋರ್ಸ್ಅನ್ನು ಸ್ಥಾಪಿಸಿ ನಾನಾ ಕಡೆ ಅಗತ್ಯವಿರುವವರಿಗೆ  ಆಹಾರ   ಮತ್ತು ದವಸ ಧಾನ್ಯಗಳನ್ನು ವಿತರಿಸಲಾಗುತ್ತಿದೆ.

ಈ ಉದಾತ್ತ ಕಾರಣಕ್ಕಾಗಿ ಮೈಸೂರಿನ ಅಖಿಲ ಕರ್ನಾಟಕ ಸಂಚಿತ್ ಸಂಜೀವ್ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಚೇತನ್ ಗೌಡ ಅವರ ನೇತೃತ್ವದಲ್ಲಿ  ಸುಮಾರು 60 ಕ್ಕೂ ಹೆಚ್ಚು ಮಂದಿ  ಕೈ ಜೋಡಿಸಿದ್ದಾರೆ. ಮೈಸೂರು ಮತ್ತು ಸುತ್ತಮುತ್ತಲಿನ ಹಸಿದ ಜೀವಿಗಳಿಗೆ ಅಗತ್ಯ ಆಹಾರ ಪೊಟ್ಟಣಗಳೊಂದಿಗೆ ದಿನ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತಿದೆ.

ಏಪ್ರಿಲ್ 2, 2020 ರಂದು ಪ್ರಾರಂಭವಾದ ಈ ಕಾರ್ಯ ಕೋವಿಡ್ -19 ಸಂಕಷ್ಟ ಕಾಲ ಕೊನೆಗೊಳ್ಳುವವರೆಗೂ ಮುಂದುವರೆಯಲಿದೆ. ಈ ತಂಡವು ಮೈಸೂರಿನ ವಿವಿಧ ಸ್ಥಳಗಳಲ್ಲಿ ಸಂಚರಿಸುತ್ತ ಆಹಾರದ ಅಗತ್ಯವಿರುವವರನ್ನು ಗುರುತಿಸಿ ಸ್ವತಃ ತಾವುಗಳೇ ಸ್ಥಳಕ್ಕೆ ತೆರಳಿ ಪದಾರ್ಥಗಳನ್ನು ನೀಡುತ್ತಿದ್ದಾರೆ.  ಸಾಕಷ್ಟು ಸ್ಲಂ ನಿವಾಸಿಗಳಿಗೆ ನೆರವಾಗಿದ್ದಾರೆ. ಮೈಸೂರಿನ ಯಾವುದೇ ಜನರು ಈ ಸಂಕಷ್ಟ ಸಮಯದಲ್ಲಿ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು  ನಮ್ಮ ಬಳಗದ ಮುಖ್ಯ ಧ್ಯೇಯವಾಗಿದೆ ಎನ್ನುತ್ತಾರೆ ಅಖಿಲ ಕರ್ನಾಟಕ ಸಂಚಿತ್ ಸಂಜೀವ್ ಅಭಿಮಾನಿ ಬಳಗದ ರಾಜ್ಯಾಧ್ಯಾಕ್ಷ ಚೇತನ್ ಗೌಡ.

ಮೈಸೂರು ಅಲ್ಲದೆ ಮಂಡ್ಯ, ದಾವಣಗೆರೆ , ಧಾರವಾಡ , ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಳದ ಸದಸ್ಯರು ಕಾರ್ಯ ಪ್ರವೃತರಾಗಿದ್ದು ಬಡವರಿಗೆ ನೆರವಾಗಿದ್ದಾರೆ. ಹಾಗೇಯೇ ಬಿಸಿಲನ್ನು ಲೆಕ್ಕಿಸದೇ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ, ವೈದ್ಯರುಗಳಿಗೆ , ಪೌರ ಕಾರ್ಮಿಕರಿಗೆ,  ನೀರು, ಹಣ್ಣು ಹಂಪಲು ಗಳನ್ನು ಅವರಿದ್ದ ಸ್ಥಳಗಳಿಗೆ ಹೋಗಿ ನೀಡುತ್ತಿದ್ದಾರೆ.‌

ಒಟ್ಟಾರೆ ಕೋವಿಡ್-19 ಮಹಾಮಾರಿಯನ್ನು ಹೊಡೆದೋಡಿಸಲು ಹಲವರು ಸ್ಪಂದಿಸಿದ್ದು ಒಳ್ಳೆಯ ಬೆಳವಣಿಗೆ. ಕೊರೋನಾ ದಿಂದ ಬಳಲುತ್ತಿದ್ದ ನಿರ್ಗತಿಕರು ಮತ್ತು ನಿರಾಶ್ರಿತರಿಗೆ ಈ ಸಂದರ್ಭದಲ್ಲಿ ನೆರವಿಗೆ ನಿಂತ ಇಂತಹ ಮಾನವೀಯ ಮೌಲ್ಯಯುಳ್ಳ ಮನಸ್ಸುಗಳು ಕೈ ಜೋಡಿಸಿರುವುದು ಅತ್ಯಂತ ಶ್ಲಾಘನೀಯ ವಿಚಾರ . ಇವರ ಈ ರೀತಿಯ ಒಳ್ಳೆಯ ಕಾರ್ಯ ಹೀಗೆಯೇ ಮುಂದುವರೆಯಲಿ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: