ಕರ್ನಾಟಕಪ್ರಮುಖ ಸುದ್ದಿ

ಡೀಸೆಲ್ ಜನರೇಟರ್ ವಿಷಾನಿಲಕ್ಕೆ ನಾಲ್ವರ ಸಾವು?

ರಾಯಚೂರು:  ಡಿಸೇಲ್ ಜನರೇಟರ್ ಆನ್ ಮಾಡಿಕೊಂಡು ರೂಮ್ ನಲ್ಲಿ ಮಲಗಿದ್ದ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ಲಿಂಗಸೂಗೂರು ಪಟ್ಟಣದ ಚೇತನ್ ಸೌಂಡ್ಸ್ ಕಚೇರಿಯಲ್ಲಿ ನಡೆದಿದೆ.

ವಿದ್ಯುತ್ ಇಲ್ಲದ ಕಾರಣ ಜನರೇಟರ್ ಆನ್ ಮಾಡಿಕೊಂಡು ಐದು ಜನ ಮಲಗಿದ್ದರು. ಜನರೇಟರಿನಿಂದ ಬಿಡುಗಡೆಯಾದ ವಿಷಾನಿಲದಿಂದ ನಾಲ್ವರು ಮೃತ ಪಟ್ಟಿರಬಹುದು ಎಂದು ಶಂಕಿಸಲಾಗುತ್ತಿದೆ. ಮೃತಪಟ್ಟವರು 20 ವರ್ಷದೊಳಗಿನ ಯುವಕರು.

ಲಿಂಗಸುಗೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೃತರನ್ನ ಮಂಜು (19), ಶಶಿಕುಮಾರ್ (20), ಅಜಪ್ಪಾ (17), ಮೌಲಪ್ಪ (20) ಎಂದು ಗುರುತಿಸಲಾಗಿದೆ.

(ಎಸ್‍.ಎನ್‍/ಎನ್‍.ಬಿ.ಎನ್‍)

Leave a Reply

comments

Related Articles

error: