ಮೈಸೂರು

ನಂಜನಗೂಡಿನಲ್ಲಿ 55ಕೊರೋನಾ ಸೋಂಕಿತರು ಪತ್ತೆ ಹಿನ್ನೆಲೆಯಲ್ಲಿ ಸೀಲ್ ಡೌನ್ ಗೆ ಸಿದ್ಧತೆ

ಮೈಸೂರು,ಏ.22:- ಜಿಲ್ಲೆಯಲ್ಲಿ ಮಂಗಳವಾರ 2 ಕೋವಿಡ್‌-19 ಪ್ರಕರಣಗಳು ಪತ್ತೆಯಾಗುವ ಮೂಲಕ ಜ್ಯುಬಿಲಿಯೆಂಟ್‌ ಜೆನರಿಕ್ಸ್‌ ಕಾರ್ಖಾನೆಯಿಂದ ಸೋಂಕಿತರಾದವರ ಸಂಖ್ಯೆ 70ಕ್ಕೇರಿದೆ. ನಂಜನಗೂಡು ತಾಲೂಕಿನಲ್ಲಿ 55ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ.   ನಂಜನಗೂಡು ನಗರ ಪ್ರದೇಶದ ವ್ಯಾಪ್ತಿಯ 14 ಹಾಗೂ ಗ್ರಾಮಾಂತರ ಪ್ರದೇಶದ 11 ಸೇರಿದಂತೆ ಒಟ್ಟು 25 ವಲಯಗಳಲ್ಲಿ ಮಂಗಳವಾರದವರೆಗೆ 55 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರು ವಾಸಿಸುವ ಮನೆಯ 100 ಮೀಟರ್‌ ಸುತ್ತಳತೆಯನ್ನು ಬಂಧನ ವಲಯ(ಕಂಟೈನ್‌ಮೆಂಟ್‌ ಜೋನ್‌) ಆಗಿ ಗುರುತಿಸಲಾಗುತ್ತಿದೆ.

ಕೊರೋನಾ ಪರೀಕ್ಷೆಗೆ ಒಳಪಟ್ಟಿರುವ ಸ್ಯಾಂಪಲ್ ಗಳ ವರದಿ ಇಂದು ಹೊರಬೀಳಲಲಿದ್ದು, ಬಳಿಕ ಸೀಲ್ ಡೌನ್ ವಲಯಗಳನ್ನು ಘೋಷಿಸಿ ಜಾರಿಗೊಳಿಸಲಾಗುವುದು ಎಂದು ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ತಾಲೂಕಿನ ಹೆಬ್ಯಾ ಗ್ರಾಮವನ್ನು ಈಗಾಗಲೇ ಸೀಲ್‌ಡೌನ್‌ ಮಾಡಲಾಗಿದ್ದು, ಉಳಿದಂತೆ ದೇವರಸನಹಳ್ಳಿ, ಕೂಗಲೂರು, ಬ್ಯಾಳಾರು, ಬಸವನಪುರ, ದೇವೀರಮ್ಮನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರು ವಾಸಿಸುವ 100 ಮೀಟರ್‌ ಸುತ್ತಳತೆಯ ಪ್ರದೇಶ ಸೀಲ್‌ ಡೌನ್‌ ಮಾಡಲು ಸಿದ್ಧತೆ ನಡೆಸಲಾಗಿದೆ. ಇನ್ನು ನಗರ ಪ್ರದೇಶದ ಹೌಸಿಂಗ್‌ಬೋರ್ಡ್‌, ರಾಷ್ಟ್ರಪತಿ ರಸ್ತೆ, ಕೆಂಪೇಗೌಡ ಲೇಔಟ್‌, ಬಸವನಗುಡಿ ಬ್ಲಾಕ್‌ ಸೇರಿದಂತೆ ಕೆಲ ಬಡಾವಣೆಗಳಲ್ಲಿ ಸೋಂಕಿತರು ವಾಸಿಸುವ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೀಲ್‌ಡೌನ್‌ ಆದ ಪ್ರದೇಶಗಳನ್ನು ಬ್ಯಾರಿಕೇಡ್‌ ಹಾಕಿ ಪ್ರವೇಶ ನಿಷೇಧಿಸಲಾಗುತ್ತದೆ. ಜನರಿಗೆ ಅಗತ್ಯವಾದ ತರಕಾರಿ, ದಿನಸಿ ಪದಾರ್ಥಗಳ ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: