ಪ್ರಮುಖ ಸುದ್ದಿ

ನಿಡ್ಡೆ ಮಲೆಯಲ್ಲಿ ಅಕ್ರಮ ಕಳ್ಳಭಟ್ಟಿ ವಶ

ರಾಜ್ಯ( ಮಡಿಕೇರಿ) ಏ.22 :- ಮಡಿಕೇರಿ ತಾಲ್ಲೂಕಿನ ಪೆರಾಜೆ ಗ್ರಾಮದ ಹಾಲೆಕಾಡು ನಿಡ್ಡೆ ಮಲೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆರೋಪಿ ಎನ್.ಪಿ.ಹೊನ್ನಪ್ಪ ಎಂಬುವವರು ಸಂಗ್ರಹಿಸಿಟ್ಟಿದ್ದ 200 ಲೀಟರ್ ಗೇರು ಹಣ್ಣಿನ ಪುಳಿಗಂಜಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ. ಅಬಕಾರಿ ನಿರೀಕ್ಷಕರಾದ ಆರ್.ಎಂ.ಚೈತ್ರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಅನಿಲ್ ಜಿ.ಅರ್., ಅಬಕಾರಿ ರಕ್ಷಕರಾದ ಅಮ್ಜದ್ ಕೆ.ಎಸ್, ರಾಜು ಎಚ್.ಎಸ್, ಲಕ್ಷ್ಮೀದೇವಿ ಎಸ್ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: